ಸುಳ್ಯ ದಸರಾ 2022 ಕ್ಕೆ ಚಾಲನೆ

0

 

ಶ್ರೀ ಶಾರದಾ ಮಾತೆಯ ಪ್ರತಿಷ್ಠೆ – ಸಮಿತಿ ಪದಾಧಿಕಾರಿಗಳಿಂದ ದೀಪ ಪ್ರಜ್ವಲನೆ

 

ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾಟ್ರಸ್ಟ್ ,ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಸುಳ್ಯ ದಸರಾ 2022 ಇಂದು ಬೆಳಗ್ಗೆ ಶ್ರೀ ಶಾರದಾ ಮಾತೆಯ ಪ್ರತಿಷ್ಠಾಪನೆಯಾಗಿ ಚಾಲನೆ ನೀಡಲಾಯಿತು. ಬೆಳಗ್ಗೆ ಜ್ಯೋತಿ ವೃತ್ತದ ಬಳಿಯಿಂದ ಶ್ರೀ ದೇವಿಯ ಮೆರವಣಿಗೆಯು ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದು ಚೆನ್ನಕೇಶವ ದೇವಸ್ಥಾನದ ಮುಂದೆ ದೇವಳದ ಅರ್ಚಕರ ನೇತೃತ್ವದಲ್ಲಿ ಪೂಜೆಯು ನೆರವೇರಿತು. ಬಳಿಕ ಶಾರದಾಂಬಾ ಕಲಾ ವೇದಿಕೆಯ ಪಕ್ಕದ ಭವ್ಯ ಅಲಂಕೃತ ಮಂಟಪದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ವೈದಿಕ ಕಾರ್ಯ ನಡೆದು ಪ್ರತಿಷ್ಟಾಪಿಸಲಾಯಿತು.

ಈ ಸಂದರ್ಭದಲ್ಲಿ ಜಂಟಿ ಸಮಿತಿ ಅಧ್ಯಕ್ಷ ರು ಪದಾಧಿಕಾರಿಗಳು ದೀಪ ಬೆಳಗಿಸಿದರು. ಸಾಮೂಹಿಕ ಪ್ರಾರ್ಥನೆಯನ್ನು ಪುರೋಹಿತರು ನೆರವೇರಿಸಿ ಮಹೋತ್ಸವಕ್ಕೆ ಶುಭ ಹಾರೈಸಿದರು.

ಬಳಿಕ ಶ್ರೀ ದೇವಿಗೆ ಪೂಜೆಯನ್ನು ನೆರವೇರಿಸಲಾಯಿತು. ಶ್ರೀ ದೇವಿಯಮೆರವಣಿಗೆ ಯಲ್ಲಿ ಎಸ್. ಸಿಕ್ಸ್ ನ 8 ಮಂದಿ ಪೂರ್ವಾಧ್ಯಕ್ಷರುಗಳು ಭಾಗವಹಿಸಿದ್ದರು.ಜಂಟಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here