ಬನ್ನೂರು ಮಹಾಲಕ್ಷ್ಮೀ ಮಂದಿರದ ಬ್ರಹ್ಮಕಲಶೋತ್ಸವದ ಬಳಿಕ ಶುಕ್ರವಾರದ ಪೂಜೆ ಸಂಪನ್ನ

0


ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ನೇತೃತ್ವ ಮತ್ತು ಬನ್ನೂರು ಗುತ್ತು ಮನೆತನದ ಸಹಕಾರದಲ್ಲಿ ಬನ್ನೂರು ಶ್ರೀ ಮಹಾಲಕ್ಷ್ಮಿ ಮಂದಿದಲ್ಲಿ ಜ.21ರಂದು ನಡೆದ ಬ್ರಹ್ಮಕಲಶೋತ್ಸವದ ಬಳಿಕ ತಿಂಗಳ ಮೂರನೆ ಶುಕ್ರವಾರ ನಡೆಯುವ ಪ್ರಥಮ ಪೂಜೆಯು ಫೆ. 18ರಂದು ಸಂಜೆ ನಡೆಯತು.
ಸಂಜೆ ಪರಿಸರದ ಮಂದಿಯಿಂದ ಭಜನೆ, ರಾತ್ರಿ ಅರ್ಚಕ ವೇ ಮೂ ರಘುರಾಮ ಭಟ್ ಅವರ ನೇತೃತ್ವದಲ್ಲಿ ಮಹಾಪೂಜೆಯ ಮೂಲಕ ಶುಕ್ರವಾರದ ಪೂಜೆ ಸಂಪನ್ನಗೊಂಡಿತ್ತು. ಈ ಸಂದರ್ಭದಲ್ಲಿ ಬನ್ನೂರು ಗುತ್ತು ಮನೆತನದ ಸುದೇಶ್ ಪೂಂಜಾ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು,  ಸದಸ್ಯೆ ಮೋಹಿನಿ ವಿಶ್ವನಾಥ್ ಸೇರಿದಂತೆ ಪರಿಸರದ ಅನೇಕ ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here