ಹರಿಹರ ಪಲ್ಲತಡ್ಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ: ಗ್ರಾಮ ಸಭೆ ನಿರ್ಣಯ

0

 

ಹರಿಹರ ಪಲ್ಲತಡ್ಕ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಸರ್ವಾನುಮತದ ನಿರ್ಣಯ

ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ

ಮದ್ಯ ಮಾರಾಟ ಮಾಡಲು ಹರಿಹರ ಪಲ್ಲತಡ್ಕ ಅವಕಾಶವಿಲ್ಲ. ಇದು ಶಾಶ್ವತವಾಗಿ ಮದ್ಯ ಮುಕ್ತ ಗ್ರಾಮ ವಾಗಿರಬೇಕು ಎಂದು ಹರಿಹರ ಪಲ್ಲತಡ್ಕ ಗ್ರಾಮ ಸಭೆ ನಿರ್ಣಯ ಮಾಡಿದೆ.
ಇಂದು ಹರಿಹರ ಪಲ್ಲತಡ್ಕದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

 

ಮಾಜಿ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಮಾತನಾಡಿ ಮದ್ಯದ ಅಂಗಡಿ ತೆರೆಯುವುದನ್ನು ತಡೆಯಬೇಕು, ಮದ್ಯ ಮಾರಾಟ ಶಾಶ್ವತವಾಗಿ ಆಗದಂತೆ ನಿರ್ಣಯ ಆಗಬೇಕು. ಸಂಬಂಧಿಸಿದವರ ಅಕ್ರಮ ಕಟ್ಟಡ ತೆರವು ಮಾಡಬೇಕು ಎಂದು ಆಗ್ರಹಿಸಿದರು.
ಶ್ಯಾಮ್ ಅವರು ಮಾತನಾಡಿ ಗ್ರಾ.ಪಂ ವತಿಯಿಂದ ಕಟ್ಟಡ ಪರ್ಮಿಶನ್ ಬೇಡ್ವಾ, ಗ್ರಾ.ಪಂ ನಿಂದ ಮದ್ಯದಂಗಡಿ ಮಾಡಲು ಅನುಮತಿ ಬೇಡ್ವಾ ಎಂದು ಕೇಳಿದರು.

 

ಇದಕ್ಕೆ ಪಿ ಡಿ ಒ ಪುರುಷೋತ್ತಮ ರವರು, ತೇಜಕುಮಾರ್ ಅವರು ಹಳೆ 1/50ಕಟ್ಟಡದ ದುರಸ್ತಿಗಷ್ಟೆ ಕೇಳಿದ್ದಾರೆ. ಆದರೆ ಅವರು ಅದನ್ನು ಕಟ್ಟಡ ಹೊಸತು ಮಾಡಿದ್ದಾರೆ. ಅದೇ ಕಟ್ಟಡದಲ್ಲಿ ವಿಜಯಕುಮಾರ್ ಎಂಬವರು ಹೊಟೇಲ್ ಗೆ ಪರ್ಮಿಶನ್ ಕೇಳಿದ್ದಾರೆ. ನಾವು ತಾ.ಪಂ ಕಾರ್ಯನಿರ್ವಹಣಾಧಿಕಾರಿ ವರದಿ ಮಾಡಿದ್ದೇವೆ ಪರಿಶೀಲಿಸಿ ಪರ್ಮಿಶನ್ ಕೊಡಬುಹುದು ಎಂದು ಆದೇಶ ಮಾಡಿದ್ದಾರೆ. ಆದರೆ ನಾವು ಈ ವರೆಗೆ ಅನುಮತಿ ಕೊಟ್ಟಿರುವುದಿಲ್ಲ ಎಂದರು.
ಹಿಮ್ಮತ್ ಮಾತನಾಡಿ,
ಬಾರ್ ತೆರೆಯುವ ಅನುಮತಿಗಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ಜಿಲ್ಲಾಧಿಕಾರಿ ರಿಜೆಕ್ಟ್ ಮಾಡಿದ್ದಾರೆ. ಆದ್ರು ಅವರು ಅದನ್ನು ಪ್ರಶ್ನಿಸಿ ಕೋರ್ಟ್‌ ಗೆ ಹೋಗಿದ್ದಾರೆ. ಸರ್ಕಾರ ಪಂಚಾಯತ್ ನ ಹಕ್ಕು ಕಸಿದು ಕೊಳ್ಳುತ್ತಿದೆ. ಪಂಚಾಯತ್ ರಾಜ್ ಪ್ರಕಾರ ಗ್ರಾಮದಲ್ಲಿ ಉದ್ಯಮ ಸ್ಥಾಪಿಸಲು ಗ್ರಾ.ಪಂ ಅನುಮತಿ ಬೇಕು ಹಾಗಿದ್ದಾಗ ಬಾರ್ ಗೂ ಪಂಚಾಯತ್ ಅನುಮತಿ ಪಡೆಯುವಂತಾಗಬೇಕು ಅಬಕಾರಿ ಇಲಾಖೆಯ ನಿಯಮದ ವಿರುದ್ದ ಹರಿಹರ ಗ್ರಾಮ ಪಂಚಾಯತ್ ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ರಾಜ್ಯಕ್ಕೆ ಮಾದರಿಯಾಗಿ ಎಂದರು.

ಇದಕ್ಕೆ ಪಿಡಿಒ ಅವರು ಪಿಡಿಒ ಸರ್ಕಾರ ಉದ್ಯೋಗಿಯಾಗಿ ಸರ್ಕಾರದ ವಿರುದ್ಧ ಹೋಗಲು ಆಗುವುದಿಲ್ಲ ಎಂದರು. ಅದಕ್ಕೆ ಹಿಮ್ಮುತ್ ಅವರು ಗ್ರಾ.ಪಂ ಆಡಳಿತ ಮಂಡಳಿ ನಿರ್ಣಯ ಮಾಡಿದರೆ ಅದನ್ನು ಪಿಡಿಒ ಕೋರ್ಟ್ ನಲ್ಲಿ ಪ್ರಶ್ನಿಸ ಬಹುದಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಪುರುಷೋತ್ತಮ ಮಾಣಿಯಾನ ಅವರು ಇವತ್ತಿನ ಗ್ರಾಮ ಸಭೆಯ ನಿರ್ಣಯಗಳನ್ನು ಅ.7 ರ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು ಅವರು ಈ ಬಗ್ಗೆ ಕೋರ್ಟ್ ಹೋಗಲಾಗುವುದು. ಈಗಾಗಲೇ ಅನಧಿಕೃತ ಕಟ್ಟಡ ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ. ವಕೀಲರತ್ರ ಮಾತನಾಡಿ ಶೀಘ್ರವಾಗಿ ಮುನ್ನಡೆಯಲಾಗುವುದು ಎಂದರು. ಪಿ.ಡಿ.ಒ ಪುರುಷೋತ್ತಮ ಮಣಿಯಾನ ಸ್ವಾಗತಿಸಿದರು. ಗ್ರಾ.ಪಂ ಸದಸ್ಯ ದಿವಾಕರ ಮುಂಡಾಜೆ ವಂದಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಉಪಾಧ್ಯಕ್ಷ ವಿಜಯ ಅಂಙಣ, ಗ್ರಾ.ಪಂ ಸದಸ್ಯರುಗಳಾದ ದಿವಾಕರ ಮುಂಡಾಜೆ, ಬಿಂಧು ಪಿ, ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here