ದನದ ರುಂಡ ಪತ್ತೆ ಪ್ರಕರಣ : ಹರಿಹರೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ

0

 

ಐನೆಕಿದು ಕೊಪ್ಪಲಗದ್ದೆಯಲ್ಲಿ ದನದ ರುಂಡ ಅ.4 ರಂದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಅ.5 ರಂದು ಹರಿಹರೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.

ಪ್ರಕರಣಕ್ಕೆ ಸಂಬಂಧಿಸಿ ದನದ ಹತ್ಯೆ ಮಾಡಿದವರು ಸಿಗಬೇಕು, ತಪ್ಪಿತಸ್ಥರಿಗೆ ತಕ್ಕ ಶಾಸ್ತಿಯಾಗ ಬೇಕೆಂದು ಪ್ರಾರ್ಥಿಸಲಾಯಿತು ಎಂದು ತಿಳಿದು ಬಂದಿದೆ. ಈ ಸಂದರ್ಭ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಸಮಿತಿ ಸದಸ್ಯರಾದ ಭವಾನಿ ಶಂಕರ ಪೈಲಾಜೆ, ಚಂದ್ರಹಾಸ ಶಿವಾಲ, ಐನೆಕಿದು ಭಾಗದ ಭುಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here