ಅಚ್ರಪ್ಪಾಡಿ ಕಿ.ಪ್ರಾ.ಶಾಲೆಯಲ್ಲಿ ಶಾರದ ಪೂಜೆ ಮತ್ತು ರಂಗಮಂದಿರದ ಗುದ್ದಲಿ ಪೂಜೆ

0

ಅಚ್ರಪ್ಪಾಡಿ ಕಿ.ಪ್ರಾ.ಶಾಲೆಯಲ್ಲಿ ಶಾರದ ಪೂಜೆ ಮತ್ತು ರಂಗಮಂದಿರದ ಗುದ್ದಲಿ ಪೂಜೆ ಅ.2 ರಂದು ನಡೆಯಿತು.
ಶಾಲಾ ರಂಗಮಂದಿರ ನಿರ್ಮಾಣಕ್ಕೆ ಅಡಿಕೆ ಮತ್ತು ತರಕಾರಿ ತೋಟ ನಿರ್ಮಾಣದ ಅಧ್ಯಕ್ಷ ಧರ್ಮಪಾಲ ಅಡ್ಡನಪಾರೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಮುಖ್ಯ ಶಿಕ್ಷಕರ ಪೋಷಕರಾದ ಎಂ. ಎಸ್. ಕೃಷ್ಣ ಮತ್ತು ಶ್ರೀಮತಿ ಶಶಿಕಲಾ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು ಮತ್ತು ಪ್ರಶಾಂತ ಮೆದು, ಶಾಲಾ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಶಾಲಾ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಅಚ್ರಪ್ಪಾಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ಧನ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ವೇಣುಗೋಪಾಲ್ ಮತ್ತು ವೇಣುಗೋಪಾಲ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಖಿಲ್ ಅಚ್ರಪ್ಪಾಡಿ, ಉಪಾಧ್ಯಕ್ಷ ರಾಮಚಂದ್ರ ಅಚ್ರಪ್ಪಾಡಿ, ಶಾಲಾ ಹಿರಿಯ ವಿದ್ಯಾರ್ಥಿಗಳಾದ ಡಿಜಪ್ಪ ಅಚ್ರಪ್ಪಾಡಿ , ಜಗದೀಶ ಅಚ್ರಪ್ಪಾಡಿ, ಶಿವರಾಮ ಮಾವಿನಕಟ್ಟೆ ಹಾಗೂ ಶಾಲಾ ಶಿಕ್ಷಕರು ಗುದ್ದಲಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷವಸಂತ ಬೊಳ್ಳಾಜೆ ರೂ.೫೦೦೦, ಉಪಾಧ್ಯಕ್ಷ ಚಂದ್ರಶೇಖರ ಅಚ್ರಪ್ಪಾಡಿ ರೂ.೫೦೦೦ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯ ಜಯರಾಮ ಅಚ್ರಪ್ಪಾಡಿ ರೂ.೧೦೧೦೦ ಹಾಗೂ ಲೋಕೇಶ ಅಚ್ರಪ್ಪಾಡಿ ರೂ. ೫೫೫೫ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನವರು ರಂಗಮಂದಿರ ನಿರ್ಮಾಣಕ್ಕೆ ಧನಸಹಾಯ ಮಾಡುವಂತೆ ಘೋಷಿಸಿದರು.
ನಂತರ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜನಾರ್ದನ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇವರ ಭಾವಚಿತ್ರಕ್ಕೆ ಹೂವು ಅರ್ಪಿಸಿ ಎಲ್ಲರಿಗೂ ಶುಭಕೋರಿದರು. ತದನಂತರ ಶಾರದಾ ಪೂಜಾ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಶೋಭಾ ಮತ್ತು ಶ್ರೀಮತಿ ಧರ್ಮಾವತಿ ಭಜನ ಕಾರ್ಯಕ್ರಮವನ್ನು ನೆರವೇರಿಸಿದರು. ರಾಮಚಂದ್ರ ಅಚ್ರಪ್ಪಾಡಿ ಪೂಜಾ ವಿಧಿವಿಧಾನವನ್ನು ನೆರವೇರಿಸಿದರು. ಶಾರದಾ ಪೂಜಾ ಕಾರ್ಯಕ್ರಮಕ್ಕೆ ಪಂಚಕಜ್ಜಾಯಕ್ಕೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಎಸ್‌ಡಿಎಮ್‌ಸಿ ನಿಕಟಪೂರ್ವ ಅಧ್ಯಕ್ಷ ಹರೀಶ ಕಡಪಳ, ಎಸ್‌ಡಿಎಂಸಿ ಅಧ್ಯಕ್ಷ ಜನಾರ್ಧನ ಹಣ್ಣು ಹಂಪಲು ವ್ಯವಸ್ಥೆ , ಹೂಗಳ ವ್ಯವಸ್ಥೆ ಪ್ರೀತೀಶ್, ಪೂಜಾ ಸಾಮಗ್ರಿಗಳ ವ್ಯವಸ್ಥೆ ಶ್ರೀಮತಿ ಶ್ವೇತಾ ವೇಣುಗೋಪಾಲ್ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಜನಾರ್ದನ ಹಾಗೂ ಶಾಲಾ ಪೋಷಕರಾದ ಪರಶುರಾಮ ಅಚ್ರಪ್ಪಾಡಿ ಉಪಹಾರದ ಜೊತೆಗೆ ಮಾಲ್ಟಿನ ವ್ಯವಸ್ಥೆಯನ್ನು ಆಗಮಿಸಿದ ಭಕ್ತಾದಿಗಳಿಗೆ ಹಂಚಿದರು.

LEAVE A REPLY

Please enter your comment!
Please enter your name here