ಅಪಘಾತದ ಗಾಯಾಳುವಿಗೆ ಪ್ರಣವ ಸೌಹಾರ್ದ ಸಹಕಾರಿ ನಿಯಮಿತದ ಅಂಗಸಂಸ್ಥೆಯಾದ ಪ್ರಣವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆರವು

0

 

ಇತ್ತೀಚೆಗೆ ಪರಿವಾರಕಾನದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿ ತೇಜಸ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಅವರ ಚಿಕಿತ್ಸೆಗೆ ಮಂಗಳೂರಿನ ಪ್ರಣವ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧನಸಹಾಯ ನೀಡಲಾಯಿತು.


ಪ್ರಣವ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ ಜಿ.ಆರ್ ಪ್ರಸಾದ್ ಟ್ರಸ್ಟ್ ವತಿಯಿಂದ ರೂ. ಹತ್ತು ಸಾವಿರ ನೀಡಿ, ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ಮಾಡಬೇಕೆಂದು ಆಸ್ಪತ್ರೆಯ ಆಡಳಿತ ಮಂಡಳಿಗೆ ವಿನಂತಿಸಿದ್ದಾರೆ. ಟ್ರಸ್ಟ್ ನ ಖಜಾಂಜಿ ಸೋಮಪ್ಪ ನಾಯ್ಕ, ನಿರ್ದೇಶಕ ಕೃಷ್ಣ ಕಾಮತ್ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here