ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

0

 

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 2023 ಫೆಬ್ರವರಿಯಲ್ಲಿ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಚಿವ ಅಂಗಾರ, ಅಧ್ಯಕ್ಷರಾಗಿ ಅರಂಬೂರು ಫ್ಲೈವುಡ್ ಮಾಲಕ ಕೃಷ್ಣ ಕಾಮತ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಟಿ.ಕುಸುಮಾಧರ, ಕೋಶಾಧಿಕಾರಿಯಾಗಿ ಹರೀಶ್ ಉಬರಡ್ಕ ಆಯ್ಕೆಯಾದರು.


ಆರ್ಥಿಕ ಸಂಚಾಲಕರಾಗಿ ನಾರಾಯಣ ಕೇಕಡ್ಕ ಹಾಗೂ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳನ್ನು ಆಯ್ಕೆಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಪಿ.ಕೆ.ಉಮೇಶ್, ಸದಸ್ಯರು, ಅರಂಬೂರು ಫ್ಲೈವುಡ್ ಮಾಲಕ ಕೃಷ್ಣ ಕಾಮತ್, ಸೇವಾ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಜಯಪ್ರಕಾಶ್ ರೈ, ದಯಾನಂದ ಸಾಲ್ಯಾನ್, ಕಿಶೋರ್ ಉಳುವಾರು, ಪುರುಷೋತ್ತಮ ಕಿರ್ಲಾಯ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here