ಅ. 9: ಬಾಳಿಲದಲ್ಲಿ ಬಲರಾಮ ಜಯಂತಿ ಮತ್ತು ವಾರ್ಷಿಕೋತ್ಸವ

0

ಭಾರತೀಯ ಕಿಸಾನ್ ಸಂಘ ಬಾಳಿಲ- ಮುಪ್ಪೇರ್ಯ ಇದರ ಆಶ್ರಯದಲ್ಲಿ ಬಲರಾಮ ಜಯಂತಿ ಮತ್ತು 19ನೇ ವಾರ್ಷಿಕೋತ್ಸವ ಅ 9ರಂದು ಬಾಳಿಲ ವಿದ್ಯಾಬೋಧಿನೀ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಪೂ. 10 ಗಂಟೆಗೆ ನಡೆಯಲಿದೆ. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಎನ್.ಜಿ ಪ್ರಭಾಕರ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾ.ಕಿ.ಸಂಘ ದ.ಕ. ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಅಧ್ಯಯನ ಶೀಲ ಪ್ರಗತಿಪರ ಕೃಷಿಕ ರಮೇಶ್ ದೇಲಂಪಾಡಿ, ಪ್ರಗತಿಪರ ಹೈನುಗಾರಿಕಾ ಕೃಷಿಕ ಹಿಂದಾರು ಜಯಗುರು ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಪ್ರಗತಿಪರ ಕೃಷಿಕರಾದ ವೆಂಕಟರಮಣ ಭಟ್ ಪವನ, ಪ್ರಗತಿಪರ ಹೈನುಗಾರಿಕಾ ಕೃಷಿಕರಾದ ಶ್ರೀಮತಿ ಶಾಂಭವಿ ಏನ್.ರೈ ಪಿಜಾವು ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30 ರಿಂದ ನೋಂದಾವಣೆ ಮತ್ತು ಲಘು ಉಪಹಾರ ನಡೆಯಲಿದೆ. ಬಳಿಕ 10 ಗಂಟೆಯಿಂದ ಸಭಾ ಕಾರ್ಯಕ್ರಮ ಬಳಿಕ ಭೋಜನ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು, ಭಾರತೀಯ ಕಿಸಾನ್ ಸಂಘ ಎಣ್ಮೂರು ವಲಯ ಮತ್ತು ಭಾರತೀಯ ಕಿಸಾನ್ ಸಂಘ ಗುತ್ತಿಗಾರು ಸಹಕಾರ ನೀಡಲಿದೆ ಎಂದು ಭಾರತೀಯ ಕಿಸಾನ್ ಸಂಘ ಬಾಳಿಲ-ಮುಪ್ಪೇರ್ಯ ಇದರ ಅಧ್ಯಕ್ಷರಾಗಿ ರಾಜಾರಾಮ ನಿಡ್ಮಾರು, ಕಾರ್ಯದರ್ಶಿ ಎ.ಎಂ. ಜಗನ್ನಾಥ ರೈ, ಜೊತೆ ಕಾರ್ಯದರ್ಶಿ ಕೌಶಿಕ್ ಕೊಡಪಾಲ ಮತ್ತು ಕೋಶಾಧಿಕಾರಿ ಎಂ. ಈಶ್ವರಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here