ಮಂಗಳೂರಿನ ಪಿಲಿನಲಿಕೆ ಸೀಸನ್ 7 ಸ್ಪರ್ಧೆಯಲ್ಲಿ ಸೋನಾ ಅಡ್ಕಾರು ತಂಡಕ್ಕೆ ತೃತೀಯ ಬಹುಮಾನ

0

ಮುಳಿಹಿತ್ಲು ಫ್ರೆಂಡ್ಸ್ ಕ್ಲಬ್ (M.F.C.) ತಂಡಕ್ಕೆ ಸ್ಮರಣಿಕೆ ಹಾಗೂ ನಗದು ಪ್ರಶಸ್ತಿ

ಮಂಗಳೂರಿನ ಮಿಥುನ್ ರೈ ಮತ್ತು ನಮ್ಮ ಟಿವಿ ಸಾರಥ್ಯದಲ್ಲಿ ಮಂಗಳ ಸ್ಟೇಡಿಯಂನಲ್ಲಿ ಅ.4ರಂದು ನಡೆದ ಪಿಲಿನಲಿಕೆ ಸೀಸನ್ 7ರ ಸ್ಪರ್ಧೆಯಲ್ಲಿ ಸುಳ್ಯದ ಸೋನಾ ಅಡ್ಕಾರು ಅವರು ಭಾಗವಹಿಸಿದ ಮುಳಿಹಿತ್ಲು ಫ್ರೆಂಡ್ಸ್ ಕ್ಲಬ್ (M.F.C.) ತಂಡಕ್ಕೆ ತೃತೀಯ ಬಹುಮಾನ ಲಭಿಸಿದೆ.


ಪಿಲಿನಲಿಕೆ ಸೀಸನ್ 7ರ ಸ್ಪರ್ಧೆಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು ಸೋನಾ ಅಡ್ಕಾರು ಅವರು ಸಣ್ಣ ಹುಲಿಯಾಗಿ ಸ್ಪರ್ಧಿಸಿದ್ದ ಮುಳಿಹಿತ್ಲು ಫ್ರೆಂಡ್ಸ್ ಕ್ಲಬ್ ತಂಡಕ್ಕೆ ತೃತೀಯ ಬಹುಮಾನ ಲಭಿಸಿದೆ.
ಮಂಗಳೂರಿನ ತರುಣ್ ಅವರು ಈಕೆಗೆ ಕೊರ್ಯೋಗ್ರಫಿ ಮಾಡಿದ್ದಾರೆ.


ಸೋನಾ ಅಡ್ಕಾರು ಅವರು ಮಂಗಳೂರಿನ ಮಂಗಳಾದೇವಿ ದಸರಾ ಟ್ಯಾಬ್ಲೋದಲ್ಲಿ ಭಾಗವಹಿಸಿದ್ದು, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಜಾಲ್ಸೂರು ಗ್ರಾಮದ ಅಡ್ಕಾರು ಶರತ್ ಅಡ್ಕಾರು ಹಾಗೂ ಶ್ರೀಮತಿ ಶೋಭಾ ಶರತ್ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here