ವಿಟ್ಲ ಸರಣಿ ಅಪಘಾತ ನಡೆಸಿದ ಕಾರು ಮರಕ್ಕೆ ಡಿಕ್ಕಿ: ಇಬ್ಬರಿಗೆ ಗಾಯ – ಓರ್ವ ಗಂಭೀರ

0

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸರಣಿ ಅಪಘಾತ ನಡೆಸಿ ಬಳಿಕ ಮರಕ್ಕೆ ಡಿಕ್ಕಿಹೊಡೆದ ಘಟನೆ ವಿಟ್ಲದ ಜಟಧಾರಿ ದೈವಸ್ಥಾನದ ಎದುರಿನ ತಿರುವಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ವಿಟ್ಲ ಸರಕಾರಿ ಬಸ್ಸು ನಿಲ್ದಾಣದ ಬರುತ್ತಿದ್ದ ಕಾರು ದ್ವಿಚಕ್ರ ವಾಹನ ಹಾಗೂ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದು ಬಳಿಕ ಅಪಾಯಕಾರಿ ತಿರುವಿನಲ್ಲಿ ಮರಕ್ಕೆ ಹೊಡೆದಿದೆ. ಕಾರಿನಲ್ಲಿದ್ದ ಮೂವರಲ್ಲಿ ಕೇರಳ ಮೂಲದ ಇಬ್ಬರು ಗಾಯಗೊಂಡಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here