ಸುಳ್ಯ ನ್ಯಾಯಾಲಯದ ಎಪಿಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜನಾರ್ದನ್ ಬಿ. ಮಂಗಳೂರು ಆರನೇ ಹೆಚ್ಚುವರಿ ನ್ಯಾಯಾಲಯಕ್ಕೆ ವರ್ಗಾವಣೆ

0

 

ಸುಳ್ಯಕ್ಕೆ ನೂತನ ಎಪಿಪಿಯಾಗಿ ಆರೋನ್ ಡಿ ‘ಸೋಜ ನೇಮಕ

ಸುಳ್ಯ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳಿಂದ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸಿ ಸರಕಾರದ ಪರವಾಗಿ ಹಲವಾರು ಪ್ರಕರಣಗಳನ್ನು ವಾದಿಸಿ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿ ಎನಿಸಿದ ಜನಾರ್ದನ್ ಬಿ ರವರು ಮಂಗಳೂರಿನ 6ನೇ ಜೆ ಎಂ ಎಫ್ ಸಿ ನ ನ್ಯಾಯಾಲಯಕ್ಕೆ ವರ್ಗಾವಣೆ ಗೊಂಡಿರುತ್ತಾರೆ.

 

 

ಕಳೆದ ಕೆಲವು ತಿಂಗಳುಗಳ ಹಿಂದೆ ಸುಳ್ಯ ನ್ಯಾಯಾಲಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಒಂದೇ ದಿನದಲ್ಲಿ 4 ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳಿಗೆ ನ್ಯಾಯಾಧೀಶರು ಜೈಲು ಶಿಕ್ಷೆ ನೀಡಲು ಕಾರಣವಾದ ಪ್ರಕರಣವನ್ನು ಸರಕಾರದ ಪರವಾಗಿ ವಾದಿಸಿ ಜನ ಮೆಚ್ಚುಗೆಯನ್ನು ಪಡೆದಿದ್ದರು. ಅದೇ ರೀತಿ ಇವರು ವಾದಿಸಿದ ಹಲವಾರು ಪ್ರಕರಣಗಳು ಆರೋಪಿಗಳಿಗೆ ಜೈಲು ಶಿಕ್ಷೆಯಾಗಿದ್ದು ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ.


ಕಾನೂನು ಅರಿವು ಕಾರ್ಯಕ್ರಮದ ಸಂಗೀತವನ್ನು ರಚಿಸಿ ಕಾನೂನು ಅರಿವು ಗೀತೆಗಳು ಹಾಡಿ ಅದರ ಸಿ ಡಿ ಬಿಡುಗಡೆಗೊಳಿಸಿ ಜಿಲ್ಲಾ ನ್ಯಾಯಾಧೀಶರ ಮತ್ತು ಹೈಕೋರ್ಟ್ ನ್ಯಾಯಾಧೀಶರ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೆಚ್ಚುಗೆಯನ್ನು ಪಡೆದಿದ್ದರು.
ಇದೀಗ ಇವರ ಸ್ಥಾನಕ್ಕೆ ವಿಟ್ಲ ಮೂಲದ ಆರೋನ್ ಡಿ’ಸೋಜ ಸುಳ್ಯ ನ್ಯಾಯಾಲಯಕ್ಕೆ ಎಪಿಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರು ಪುತ್ತೂರು ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತಿದ್ದು ಇದೀಗ ನೂತನವಾಗಿ ಎಪಿಪಿಯಾಗಿ ಇವರನ್ನು ಸರ್ಕಾರ ಆಯ್ಕೆಗೊಳಿಸಿದೆ.

LEAVE A REPLY

Please enter your comment!
Please enter your name here