ಪುತ್ತೂರಿನ ವಿಷನ್ ಸೇವಾ ಟ್ರಸ್ಟ್‌ನಿಂದ ಒಳಿತು ಮಾಡು ಮನುಷ್ಯ ಕಾರ್ಯಕ್ರಮ

0

ಪುತ್ತೂರು: ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್‌ನ ಮಹತ್ವ ಪೂರ್ಣ ಯೋಜನೆಯಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸಕ್ತರಿಗೆ ನಿರಂತರವಾಗಿ ದಾನಿಗಳ ಸಹಕಾರದಿಂದ ದಿನಸಿ ಸಾಮಗ್ರಿಗಳ ಕಿಟ್ ನೀಡುವ ಯೋಜನೆ “ಒಳಿತು ಮಾಡು ಮನುಷ್ಯ” ಇದರ ಹನ್ನೆರಡನೆಯ ತಿಂಗಳ ಕಾರ್ಯಕ್ರಮ ಫೆ.27 ರಂದು ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು. ಜೆಸಿಐ ಶಶಿರಾಜ್ ರೈ, ಈಶ್ವರಮಂಗಲದ ಮಲ್ಲೇಶ್ ಕೆ, ಟ್ರಸ್ಟ್‌ನ ಗೌರವ ಸಲಹೆಗಾರರಾದ ಕಲಾವಿದ ಕೃಷ್ಟಪ್ಪ ಶಿವನಗರ, ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್ ಪುತ್ತೂರು, ಅಧ್ಯಕ್ಷೆ ಶೋಭಾ ಚೇತನ್, ಸಂಘಟನಾ ಕಾರ್ಯದರ್ಶಿ ಸಂತೋಷ್, ಖಜಾಂಚಿ ವಸಂತಿ ಶೀಲಾ, ಕಾರ್ಯದರ್ಶಿ ಮೋಹನ ಪಂಜಲ, ಗೀತಾ ಮತ್ತು ಸದಸ್ಯರಾದ ಪ್ರವೀಣ್ ಕಲ್ಲೇರಿ, ಪವನ, ಮತ್ತು ಉಷಾ ಉಪಸ್ಥಿತರಿದ್ದರು. ಕಲಾವಿದ ಕೃಷ್ಟಪ್ಪ ಶಿವನಗರ ನಿರೂಪಣೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here