ಉಪ್ಪಿನಂಗಡಿಯಲ್ಲಿ ಜನಮನ ಮೆಚ್ಚುಗೆ ಪಡೆದ ಗಂಗಾ ಪೂಜೆ

0

 

ಉಪ್ಪಿನಂಗಡಿ : ಶ್ರೀ ಮಾಧವ ಶಿಶು ಮಂದಿರ ಆಶ್ರಯದಲ್ಲಿ ಮಾತೃ ಮಂಡಳಿ ಉಪ್ಪಿನಂಗಡಿ ಇದರ ನೇತೃತ್ವದಲ್ಲಿ ನಡೆದ 15 ನೇ ವರ್ಷದ ಪವಿತ್ರ ಗಂಗಾ ಪೂಜೆಯ ಕಾರ್ಯಕ್ರಮದಲ್ಲಿ ಕಾಶಿ ಸ್ವರೂಪದ ಗಂಗಾ ಆರತಿ  ಜನಮನ ಮೆಚ್ಚುಗೆ ಪಡೆಯಿತು.

 


ಕಾರ್ಯಕ್ರಮದ ಪ್ರಯುಕ್ತ ನಡೆದ ಗಾಳಿಪಟ ಉತ್ಸವದಲ್ಲಿ ಪುತ್ತೂರು ಶಾಸಕರಾದಿಯಾಗಿ ಭಾರೀ ಸಂಖ್ಯೆಯಲ್ಲಿ ಜನರು ಗಾಳೀಪಟ ಹಾರಿಸಿ ಸಂಭ್ರಮಿಸಿದರು.
ಮಾತೃ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಮಾತನಾಡಿ ಸಮಾಜದಲ್ಲಿನ ಸಕಲ ದುರಿತಗಳಿಗೆ ಮನೆ ದುರ್ಬಲವಾಗಿರುವುದೇ ಪ್ರಮುಖ ಕಾರಣ. ಹೀಗಾಗಿ ಮನೆಗಳಲ್ಲಿ ಸಂಸ್ಕಾರದ ಬೆಸುಗೆ ಬಲವಾಗಿರುವಂತೆ ನೋಡಿಕೊಳ್ಳಬೇಕೆಂದರು.

ಸಭಾ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸಿ ಆರ್.ಪಿ.ಎಫ್. ಯೋಧೆ ಸವಿತಾ ವಿ ಶೆಟ್ಟಿ ಮಾತನಾಡಿ, ಗಂಗಾ ನದಿಯ ಪರಿಶುದ್ದತೆ ಅದಕ್ಕಿರುವ ರೋಗ ನಿರೋಧಕ ಶಕ್ತಿ ಗಂಗಾ ನದಿಯನ್ನು ಪೂಜ್ಯನೀಯಗೊಳಿಸಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಗಂಗಾ ಪೂಜೆ ನಡೆಸುತ್ತಿರುವುದು ಅರ್ಥಪೂರ್ಣವೆಂದರು.

ಸಮಾಜದಲ್ಲಿ ಸಾಮರಸ್ಯ ಭಾವ ಮೂಡಿಸುವ ಸಲುವಾಗಿ ಪ್ರತಿವರ್ಷವೂ ಇಲ್ಲಿ ಗಂಗಾಪೂಜಾ ಕಾರ್ಯಕ್ರಮದಲ್ಲಿ ಪ್ರಧಾನ ಪೂಜಾಕರ್ತೃವಾಗಿ ಉಪೇಕ್ಷಿತ ಸಮಾಜದ ಬಂಧುಗಳೇ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದು, ಅಂತೆಯೇ ಈ ಬಾರಿ ಕುಂಞಣ್ಣ ಗಿರಿಜಾ ದಂಪತಿ ಪೂಜೆ ನೆರವೇರಿಸಿದರು.

ಗಮನ ಸೆಳೆದ ಗಂಗಾ ಆರತಿ
ಹದಿನೈದನೇ ವರ್ಷದ ಗಂಗಾ ಪೂಜೆಯಲ್ಲಿ ನದಿಗೆ ಭಾಗೀನ ಸಮರ್ಪಣೆಯ ನಂತರ ವೇದಮಂತ್ರ ಘೋಷಣೆಗಳೊಂದಿಗೆ ನದಿಗೆ ಮಡಲಾದ ಗಂಗಾ ಆರತಿಯು ಆಕರ್ಷಕವಾಗಿ ಮೂಡಿ ಬಂದು ನೆರೆದ ಭಕ್ತಗಣವನ್ನು ಭಾವುಕತೆಗೆ ಒಳಗಾಗಿಸಿತು. ಬಳಿಕ ನೂರಾರು ಭಕ್ತರಿಂದ ನದಿಯಲ್ಲಿ ಹಣತೆಗಳನ್ನು ತೇಲಿ ಬಿಡುವ ಮೂಲಕ ಗಂಗಾಪೂಜೆಯನ್ನು ನೆರವೇರಿಸಿದರು. ಸಾಲು ಸಾಲು ಹಣತೆಗಳು ನದಿಯಲಿ ತೇಲಿ ಹೋಗುತ್ತಿದ್ದ ದೃಶ್ಯಾವಳಿಗಳು ಮನ ಮೋಹಕವಾಗಿದ್ದವು.

ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಶಿವಾಜಿ ನಗರ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಸುನಿಲ್ ಅನಾವು, ರಾಮ ನಾಯ್ಕ್, ಜಯಂತ ಪುರೋಳಿ, ಹರಿರಾಮಚಂದ್ರ, ಪ್ರೇಮಲತಾ ಕಾಂಚನ, ಹರಿಣಿ ಕೆ, ಮಹೇಶ್ ಬಜತ್ತೂರು, ಮಾತೃ ಮಂಡಳಿಯ ಸಂಚಾಲಕಿ ಶ್ಯಾಮಲಾ ಶೆಣೈ, ಅಧ್ಯಕ್ಷೆ ಜಯಶ್ರೀ ಜನಾರ್ದನ್, ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್, ಜತೀಂದ್ರ ಶೆಟ್ಟಿ ಅಲಿಮಾರ, ಎನ್ ಹರೀಶ್ ನಾಯಕ್, ಕಂಗ್ವೆ ವಿಶ್ಬನಾಥ ಶೆಟ್ಟಿ, ಅನೂಪ್ ಸಿಂಗ್ , ಶಶಿಧರ್ ಪೂಜಾರಿ, ಅಶೋಕ್, ಸುಂದರ ಗೌಡ, ಗೋಪಾಲಕೃಷ್ಣ ನಾಯಕ್, ಚಿದಾನಂದ, ವಸಂತ, ಎನ್ ಉಮೇಶ್ ಶೆಣೈ, ಮಹೇಶ್ ಕಿಣಿ , ವಿವೇಕಾನಂದ ಪ್ರಭು, ಉಮೇಶ್ ಪೂಜಾರಿ, ಶೋಭಾ ದಯಾನಂದ್, ಸುಗಂಧಿ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here