ಉಪ್ಪಿನಂಗಡಿಯಲ್ಲಿ ಸಾಮೂಹಿಕ ಶಿವ ನಮಸ್ಕಾರ, ಶಿವ ಅಷ್ಟೋತ್ತರ ಶಿವನಾಮಾನಿ ಕಾರ್ಯಕ್ರಮ

0

ಪುತ್ತೂರು: ಶಿವರಾತ್ರಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ವತಿಯಿಂದ ಸಾಮೂಹಿಕ ಶಿವ ನಮಸ್ಕಾರ ಮತ್ತು ಶಿವ ಅಷ್ಟೋತ್ತರ ಶಿವನಾಮಾನಿ ಕಾರ್ಯಕ್ರಮ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ಫೆ. 27ರಂದು ಜರಗಿತು. ಸುಜಾತರವರ ಶಿವ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್ ಜೈನ್ ದೇಹಕ್ಕೆ ಚೈತನ್ಯ ನೀಡುವ ಉಸಿರಾಟದ ಕ್ರಿಯೆ, ಶಾರೀರಿಕ ಚಾಲನೆ ಮತ್ತು ಗಣಪತಿ ನಮಸ್ಕಾರ ಮಾಡಿಸಿದರು. ಸಮಿತಿಯ ಪ್ರಾಂತ ಪ್ರತಿನಿಧಿ ಶಿವಾನಂದ, ಕದ್ರಿನಗರ ಸಂಚಾಲಕ ಆನಂದ ಕುಂಟಿನಿ, ಕಂಕನಾಡಿ ನಗರ ಸಂಚಾಲಕ ಜಯಪ್ರಕಾಶ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಜಯಂತ್ ಪೊರೋಳಿ ಮತ್ತು ಹರಿರಾಮಚಂದ್ರ, ಮಹಾಕಾಳಿ ದೇವರ ದೈವ ನರ್ತಕ ಧರ್ಣಪ್ಪ ಬಿ, ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕ ಯು.ಜಿ.ರಾಧಾ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಚಂದ್ರ ಮುಳಿಯ, ಹಿರಿಯ ಯೋಗಬಂಧು ಚಂದ್ರಾವತಿ ಸಹಿತ ಹಲವರು ಭಾಗವಹಿಸಿದ್ದರು.

 

ಜಿಲ್ಲಾ ಸೇವಾ ಪ್ರಮುಖ್ ಶಿವಪ್ರಸಾದ್ ಪೊಳಲಿ ಬೌದ್ಧಿಕ್ ನಲ್ಲಿ ಪ್ರತಿ ವರ್ಷ ಮಂಗಳೂರು ನಗರಕ್ಕೆ ಸೀಮಿತವಾಗಿದ್ದ ಶಿವ ನಮಸ್ಕಾರ ಕಾರ್ಯಕ್ರಮವನ್ನು ಜಿಲ್ಲೆಯ ಮೂರು ಪ್ರಸಿದ್ಧ ದೇವಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಹೆಚ್ಚು ಯೋಗಬಂಧುಗಳು ಶಿವರಾತ್ರಿಯ ಅಂಗವಾಗಿ ನಡೆಯುವ ಶಿವ ನಮಸ್ಕಾರ, ಶಿವಾಷ್ಟೋತ್ತರ ಶತ ನಾಮಾನಿ ಅರ್ಚನೆಗಳಲ್ಲಿ ಜೋಡಿಸಿಕೊಳ್ಳಲು ಸಾಧ್ಯವಾಗಿದೆ. ನಾವೆಲ್ಲರೂ ರುದ್ರನನ್ನು ಆರಾಧಿಸುವ ಮೂಲಕ ಸರ್ವ ದು:ಖಗಳಿಗೆ ಕಾರಣವಾದದ್ದನ್ನು ನಿವಾರಣೆ ಮಾಡಬಹುದು ಎಂದು ಹೇಳಿದರು. ಎಸ್.ಪಿ.ವೈ.ಎಸ್.ಎಸ್. ಉಪ್ಪಿನಂಗಡಿ ಶಾಖೆ, ಪುತ್ತೂರಿನ ೨ ಶಾಖೆಗಳು ಹಾಗೂ ಕಲ್ಕಡ್ಕದ ಶಾಖೆಗಳ ಯೋಗಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಒಟ್ಟು ೩ ಹಂತದ ಶಿವ ನಮಸ್ಕಾರದಲ್ಲಿ ಶಿಕ್ಷಕರಾಗಿ ಅಮಿತಾ ಗೌತಮ್, ಆಶಲತಾ, ಅಶೋಕ್, ನಿತಿನ್ ಅವರು ಶಿವ ನಮಸ್ಕಾರದ ವಿವರಣೆ ನೀಡಿದರು. ಸಹಶಿಕ್ಷಕರಾದ ಆಶಾ, ಮಂಜುನಾಥ್, ಪದ್ಮಾವತಿ, ಸೃಜನ್, ಯಶೋಧರ, ಜಲಜಾಕ್ಷಿ, ವಿದ್ಯಾ, ಈರಣ್ಣ, ದಿವ್ಯಾ, ರವಿರಾಜ್, ಸತೀಶ್, ಸುಲತಾ, ಬಾಲಕೃಷ್ಣ, ಶೋಭಾ ಪ್ರಾತ್ಯಕ್ಷಿತೆ ನೀಡಿದರು. ಪೂರ್ಣಿಮಾ ಭಟ್ ಶಿವಾಷ್ಟೋತ್ತರ ಶತನಾಮಾನಿ ಮಂತ್ರ ಪಠಣ ಮಾಡಿದರು. ಸಂದೇಶ್ ಶೆಣೈ ಮತ್ತು ನಮಿತಾ ಸಂದೇಶ್ ದಂಪತಿ ಶಿವ ಪುಷ್ಪಾರ್ಚನೆ ನೆರವೇರಿಸಿದರು. ಹರಿಕಿರಣ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಪ್ರದೀಪ್ ಆಚಾರ್ಯ ವಂದಿಸಿದರು. ಎಸ್.ಪಿ. ವೈ.ಎಸ್.ಎಸ್. ಉಪ್ಪಿನಂಗಡಿ ಶಾಖೆಯ ಸಂಚಾಲಕ ಗೌತಮ ಕುಕ್ಯಾನ್ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here