ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವ ಪ್ರಯುಕ್ತ ಜಾಲ್ಸೂರು ಹಾಗೂ ಕನಕಮಜಲು ಗ್ರಾಮಸ್ಥರಿಗೆ ಕ್ರೀಡಾಕೂಟ

0

ಶ್ರೀಗುರುದೇವ ಲಲಿತಕಲಾ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಮೂರ್ಜೆ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಇದರ ಶತಮಾನೋತ್ಸವ ಕಾರ್ಯಕ್ರಮವು ಅ.16ರಂದು ಜರುಗಲಿದ್ದು, ಆ ಪ್ರಯುಕ್ತ ಜಾಲ್ಸೂರು ಹಾಗೂ ಕನಕಮಜಲು ಗ್ರಾಮಸ್ಥರಿಗೆ ಕ್ರೀಡಾಕೂಟವು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಅ.9ರಂದು ಜರುಗಿತು.

 

ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಆಗಮಿಸಿದ ಕ್ರೀಡಾಜ್ಯೋತಿಯ ಮೂಲಕ ಮಂಡ್ಯ – ಮೈಸೂರು ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಮೂರ್ಜೆ ಅವರು ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.
ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶತಮಾನೋತ್ಸವ ಸಮಿತಿಯ ಗೌರವ ಸಲಹೆಗಾರ ನ. ಸೀತಾರಾಮ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ದೈಹಿಕ ಶಿಕ್ಷಣ ಶಿಕ್ಷಕ ಹರಿಪ್ರಕಾಶ್ ಅಡ್ಕಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಕಾಳುಹೆಕ್ಕುವ ಸ್ಪರ್ಧೆ, ಕಪ್ಪೆ ಓಟ, 1ರಿಂದ 2ನೇ ತರಗತಿ ವಿದ್ಯಾರ್ಥಿಗಳಿಗೆ ಲಕ್ಕಿಗೇಮ್, ಒಂಟಿಕಾಲು ಓಟ, ಬಾಲ್ ಎಸೆತ, 3ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ 50 ಮೀಟರ್ ಓಟ, ಸಂಗೀತ ಕುರ್ಚಿ, ಲಿಂಬೆ ಚಮಚ ಓಟ, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀಟರ್ ಓಟ, ಸೂಜಿ ನೂಲು ಓಟ, ಸ್ಮರಣ ಶಕ್ತಿ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 100 ಮೀಟರ್ ಓಟ, ಗೋಣಿಚೀಲ ಓಟ, ಗುಂಡು ಎಸೆತ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ 100 ಮೀಟರ್ ಓಟ, ಹಗ್ಗ ಜಗ್ಗಾಟ, ಗುಂಡು ಎಸೆತ, ಸಾರ್ವಜನಿಕರ ವಿಭಾಗದಲ್ಲಿ ಪುರುಷರಿಗೆ ರಸ್ತೆ ಓಟ, ಗುಂಡು ಎಸೆತ, ನಿಧಾನ ಬೈಕ್ ರೇಸ್, ಹಗ್ಗಜಗ್ಗಾಟ, ಮಹಿಳೆಯರಿಗೆ ರಸ್ತೆ ಓಟ, ಗುಂಡು ಎಸೆತ, ನಿಧಾನ ಸ್ಕೂಟಿ ರೇಸ್, ಹಗ್ಗಜಗ್ಗಾಟ, ಹಿರಿಯ ನಾಗರಿಕರ ವಿಭಾಗದಲ್ಲಿ ಪುರುಷರಿಗೆ ತೆಂಗಿನಕಾಯಿ ಸಿಪ್ಪೆ ತೆಗೆಯುವುದು, ನಿಧಾನ ನಡಿಗೆ, ಅಡಿಕೆ ಸುಲಿಯುವುದು, ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ, ನಿಧಾನ ನಡಿಗೆ, ಲಕ್ಕಿಗೇಮ್ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿತು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ನಿರ್ದೇಶಕರುಗಳಾದ ಕರುಣಾಕರ ರೈ ಕುಕ್ಕಂದೂರು, ಶ್ರೀಕೃಷ್ಣ ಭಟ್ ನೆಡಿಲು, ಮಹೇಶ್ವರ ಎಸ್. ಕಾರಿಂಜ, ಗಣೇಶ್ ಅಂಬಾಡಿಮೂಲೆ, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಭಾರತಿ ಪಿ.ಕೆ., ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಸೀತಾರಾಮ ಮಠ, ಶೇಷಪ್ಪ ನಾಯ್ಕ ಕಜೆಗದ್ದೆ, ಸುಖೇಶ್ ಅಡ್ಕಾರುಪದವು, ಸಂಘದ ಕಾನೂನು ಸಲಹೆಗಾರರುಗಳಾದ ದೇವಿಪ್ರಸಾದ್ ಆಳ್ವ, ಚಂದ್ರಶೇಖರ ಕೆ. , ಸಹಕಾರಿ ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ನಿವೃತ್ತ ಸಿಬ್ಬಂದಿಗಳು, ಜಾಲ್ಸೂರು, ಕನಕಮಜಲು ಗ್ರಾಮದ ಕ್ರೀಡಾಭಿಮಾನಿಗಳು, ಸಹಕಾರಿ ಬಂಧುಗಳು ಸೇರಿದಂತೆ ಕ್ರೀಡಾಸ್ಪರ್ಧಾಳುಗಳು ಉಪಸ್ಥಿತರಿದ್ದರು. ಸಹಕಾರಿ ಸಂಘದ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here