ಬೆಳ್ಳಾರೆಯಲ್ಲಿ 168ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ,ಪ್ರತಿಭಾ ಪುರಸ್ಕಾರ ,ಸನ್ಮಾನ

0

ಸಂಘಟನಾ ಶಕ್ತಿಯಿಂದ ಸಮಾಜದ ಅಭಿವೃದ್ಧಿ – ಸಚಿವ ಎಸ್.ಅಂಗಾರ

ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ನೀಡಬೇಕು.
ಯಾವುದೇ ಕೆಲಸಗಳನ್ನು ಮಾಡುವಾಗ ಗುರುಹಿರಿಯರನ್ನು ನೆನಪಿಸಿಕೊಳ್ಳಬೇಕು.ಬಿಲ್ಲವ ಸಂಘದಿಂದ ಸಮಾಜದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದೆ.ಸಂಘಟನಾ ಶಕ್ತಿಯಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಎಂದು ಸಚಿವ ಎಸ್.ಅಂಗಾರ ಹೇಳಿದರು.
ಅವರು ಬೆಳ್ಳಾರೆ ಅಜಪಿಲ ಶ್ರಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅ.09 ರಂದು ನಡೆದ
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ, ಯುವವಾಹಿನಿ ಸುಳ್ಯ ಘಟಕ ಮತ್ತು ಬಿರುವೆರ್ ಕುಡ್ಲ ಸುಳ್ಯ ಘಟಕ ಹಾಗೂ ಬಿಲ್ಲವ ಮಹಿಳಾ ಘಟಕ ಸುಳ್ಯ ಇದರ ಜಂಟಿ ಆಶ್ರಯದಲ್ಲಿ 168 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ,ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಬಿಲ್ಲವ ಸಂಘ ಸ್ಥಾಪಕಾಧ್ಯಕ್ಷ ಜನಾರ್ಧನ ಪೂಜಾರಿ ಅಲೆಕ್ಕಾಡಿ,
ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ, ಯುವವಾಹಿನಿ ಅಧ್ಯಕ್ಷ ಅನಿಲ್ ಪೂಜಾರಿ ಕುತ್ಯಾಡಿ, ಮಹಿಳಾ ಘಟಕದ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಬಿರುವೆರ್ ಕುಡ್ಲ ಇದರ ಅಧ್ಯಕ್ಷ ಭಾಸ್ಕರ ಕೋಟ್ಯಾನ್ ಉಪಸ್ಥಿತರಿದ್ದು ಮಾತನಾಡಿದರು.

 

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ವಿಠಲದಾಸ್ ಎನ್.ಎಸ್.ಡಿ.ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.
ಕು.ಕುಶಿ ಪಿ.ಎಸ್.ಪ್ರಾರ್ಥಿಸಿ, ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿ, ನವೀನ್ ಕುಮಾರ್ ಸಾರಕರೆ ವಂದಿಸಿದರು.
ಪುರೋಹಿತರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು.
ಬೆಳಿಗ್ಗೆ ಸುರೇಶ್ ಪೂಜಾರಿ ಪೆರುವಾಜೆ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ಗುರುಪೂಜೆ ನಡೆಯಿತು.

*ಸಾಧಕರಿಗೆ ಸನ್ಮಾನ*
ಬಂಟ್ವಾಳ ಸ.ಪ್ರ.ದ.ಕಾ.ಸಹ ಪ್ರಾಧ್ಯಾಪಕ ಡಾ.ಅಚ್ಯುತ ಪೂಜಾರಿ, ಸಮಾಜ ಸೇವೆ ಮಾಡುತ್ತಿರುವ ಡಾ.ರವಿ ಕಕ್ಕೆ ಪದವು, ರಾಜ್ಯ ಮಟ್ಟದ ವಿಶ್ವಮಾನ್ಯ ಕನ್ನಡಿಗ ಪುರಸ್ಕೃತರಾದ ಕೋಟಿಯಪ್ಪ ಪೂಜಾರಿ ಸೇರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಅತ್ಯುತ್ತಮ ಹೈನುಗಾರಿಕ ಕೃಷಿಕ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವಾಜೆ ಹಿರಿಯ ಪ್ರಗತಿಪರ ಕೃಷಿಕ ಪೂವಪ್ಪ ಪೂಜಾರಿ ಸಾರಕರೆ, ಪಿ.ಯುಸಿ ಯಲ್ಲಿ ಶೇ. 97 ಅಂಕ ಪಡೆದ ಕು.ಅನನ್ಯ,ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರದೀಪ ಟಿ ಕಾಪುತ್ತಡ್ಕ ಇವರನ್ನು ಶಾಲು ಹೊದಿಸಿ ಫಲ,ಪುಷ್ಪ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

LEAVE A REPLY

Please enter your comment!
Please enter your name here