ಸುಳ್ಯದಲ್ಲಿ ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಶಾಖೆ ತೆರೆಯಲು ನಿರ್ಧಾರ

0

 

 

ಕಳೆದ 22 ವರ್ಷಗಳಿಂದ ಪುತ್ತೂರಿನಲ್ಲಿ ವ್ಯವಹರಿಸುತ್ತಿರುವ ಪರಿವಾರ ಬಂಟ ಸಮುದಾಯದ ಪರಿವಾರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 4 ನೇಯ ನೂತನ ಶಾಖೆಯನ್ನು ಸುಳ್ಯದಲ್ಲಿ ತೆರೆಯುವ ಕುರಿತು ಸಮಾಲೋಚನಾ ಸಭೆಯು ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಅ.9 ರಂದು ಸುಳ್ಯ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಿತು.
ಮುಂದಿನ ಡಿಸೆಂಬರ್ ತಿಂಗಳ ಪ್ರಥಮ ವಾರದಲ್ಲಿ ಸುಳ್ಯದಲ್ಲಿ ಶಾಖೆ ತೆರೆಯುವ ಬಗ್ಗೆ ನಿರ್ಧರಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರಾದ ರಘುನಾಥ್, ಸತೀಶ್, ರತ್ನಾಕರ, ಸುದೇಶ್ ಕುಮಾರ್ ಕೆ, ಗೋಪಾಲ ಪಿ, ಸದಾಶಿವ ಟಿ, ಶ್ರೀಮತಿ ಹೇಮಲತಾ ಎಸ್, ಶ್ರೀಮತಿ ಗುಲಾಬಿ ಕೆ, ಸಿ.ಇ.ಒ.ಸುಧಾಕರ ಕೆ.ಪಿ, ಸಲಹಾ ಸಮಿತಿ ಅಧ್ಯಕ್ಷ ಸತ್ಯಕುಮಾರ್ ಆಡಿಂಜ, ಸಂಘದ ಅಧ್ಯಕ್ಷ ವಿಠಲ ದೋಣಿಮೂಲೆ, ಉಪಾಧ್ಯಕ್ಷ ನವೀನ್ ಕೇರ್ಪಳ, ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.
ಸುಳ್ಯ ವಲಯದ ಸದಸ್ಯ ರಾದ ಸುಧಾಕರ ಆಲೆಟ್ಟಿ, ಶಾಂತರಾಮ ಎಲಿಕ್ಕಳ,ದಿನೇಶ್ ಬಡ್ಡಡ್ಕ, ಭುವನೇಶ್ವರ ಬಡ್ಡಡ್ಕ, ಗಣೇಶ್ ಪೈಚಾರು, ನವೀನ್ ಕುಮಾರ್ ಆಲೆಟ್ಟಿ, ಗೋಪಾಲ ಪೈಚಾರು, ಗೋಪಾಲ ಕೇರ್ಪಳ,
ಸರೋಜಿನಿ ಎಲಿಕ್ಕಳ, ವಾಣಿ ವಿಠಲ ದೋಣಿಮೂಲೆ, ಶಶಿಕಲಾ ಆಡಿಂಜ, ಗೀತಾ ಗೂಡಿಂಜ,‌ಚಂದ್ರಾವತಿ ಬಡ್ಡಡ್ಕ, ರಕ್ಷಾ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಿ.ಇ.ಒ ಸುಧಾಕರ ರವರು ಪೂರ್ವ ಭಾವಿ ಸಿದ್ದತೆಯ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here