ತಿಂಗಳಾಡಿ: ಅಡಿಕೆ ಕಳ್ಳತನ-ಪೊಲೀಸ್ ದೂರು

0

ಪುತ್ತೂರು: ಅಡಿಕೆ ಅಂಗಡಿಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ನಾಲ್ಕು ಗೋಣಿ ಅಡಿಕೆಯನ್ನು ಕಳವು ಮಾಡಿರುವ ಘಟನೆ ಕೆದಂಬಾಡಿ ಗ್ರಾಮದ ತಿಂಗಳಾಡಿಯಲ್ಲಿ ಮಾ.1ರಂದು ರಾತ್ರಿ ನಡೆದಿದೆ.


ತಿಂಗಳಾಡಿ ಶಾಲಾ ಬಳಿ ಅಡಿಕೆ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ರೈ ಎಂಬವರ ಅಂಗಡಿಯ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯೊಳಗೆ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಮಾರು 60 ಸಾವಿರ ರೂ ಮೌಲ್ಯದ 4 ಗೋಣಿ ಚೀಲ ಅಡಿಕೆಯನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಡಿಕೆ ಅಂಗಡಿ ಮಾಲಕರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜಗನ್ನಾಥ ರೈ ಅವರ ಅಂಗಡಿಯ ಬಗ್ಗೆ ಮಾಹಿತಿ ತಿಳಿದಿರುವ ಕಳ್ಳರೇ ಅಡಿಕೆ ಕಳ್ಳತನ ನಡೆಸಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here