ಸುಳ್ಯ ನ್ಯಾಯಾಲಯದ ಎಪಿಪಿ ಜನಾರ್ಧನ್ ಬಿ. ಯವರಿಗೆ ಬೀಳ್ಕೊಡುಗೆ ಸಮಾರಂಭ

0

 

ಸುಳ್ಯ ನ್ಯಾಯಾಲಯದಲ್ಲಿ ಎ ಪಿ ಪಿ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಮಂಗಳೂರಿನ 6ನೆ JMFC ನ್ಯಾಯಾಲಯಕ್ಕೆ ವರ್ಗಾವಣೆ ಹೊಂದಿದ್ದು ಇವರನ್ನು ಬೀಳ್ಕೊಡುವ ಸಮಾರಂಭ ಸುಳ್ಯ ನ್ಯಾಯಾಲಯದ ಆವರಣದಲ್ಲಿ ಇಂದು ನಡೆಯಿತು.

 

ಸುಳ್ಯ ಸಿ ಜೆ ಮತ್ತು ಜೆ ಎಂ ಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕು ಅರ್ಪಿತಾ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯಾಲಯದ ಸಿಬ್ಬಂದಿ ವರ್ಗದವರಿಂದ ಜನಾರ್ದನ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ನ್ಯಾಯಾಧೀಶ ಕು. ಅರ್ಪಿತಾ ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಸುಳ್ಯ ತಹಶೀಲ್ದಾರ್ ಕು ಅನಿತಾಲಕ್ಷ್ಮಿ, ಪುತ್ತೂರು ಉಪ ವಿಭಾಗದ ಡಿ ವೈ ಎಸ್ ಪಿ ಡಾ. ವೀರಯ್ಯ ಹಿರೇಮಠ್ ನೂತನವಾಗಿ ಸುಳ್ಯ ನ್ಯಾಯಾಲಯಕ್ಕೆ ಎಪಿಪಿಯಾಗಿ ಆಗಮಿಸಿದ ಆರೋನ್ ಡಿಸೋಜ , ಸುಳ್ಯ ಪೊಲೀಸ್ ಉಪ ನಿರೀಕ್ಷಕ ದಿಲೀಪ್ ಜಿ ಆರ್, ವಲಯ ಅರಣ್ಯಾಧಿಕಾರಿ ಗಿರೀಶ್, ಹಿರಿಯ ವಕೀಲರಾದ ಬಿ.ವೆಂಕಪ್ಪ ಗೌಡ, ಸೂರ್ಯನಾರಾಯಣ ಭಟ್, ಉಪಸ್ಥಿತರಿದ್ದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮಟ್ಟೆ , ವಕೀಲರುಗಳಾದ ದೀಪಕ್ ಕುತ್ತಮೊಟ್ಟೆ , ಸತೀಶ್ ಕುಂಬಕೊಡ್, ಶ್ಯಾಮ್ ಪಾನತಿಲ,ನಳಿನ್ ಕುಮಾರ್ ಕೊಡ್ತುಗೊಳಿ, ದಿಲೀಪ್ ಬಾಬ್ಲುಬೆಟ್ಟು ಸೇರಿದಂತೆ ಹಲವು ಗಣ್ಯರು ಜನಾರ್ದನ್ ಅವರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here