ನೆಹರು ಯುವ ಕೇಂದ್ರ, ಸರ್ವೆ ಷಣ್ಮುಖ ಯುವಕ ಮಂಡಲ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಮ್ ಫೆಸಿಲಿಟೇಶನ್ ಕ್ಯಾಂಪೇನ್

0

ಪುತ್ತೂರು: ಭಾರತ ಸರಕಾರ ಯುವ ಕಾರ್ಯ ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ ಇದರ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಮ್ ಆಂಡ್ ಫೆಸಿಲಿಟೇಶನ್ ಕ್ಯಾಂಪೇನ್ ಕಾರ್ಯಕ್ರಮ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.28ರಂದು ನಡೆಯಿತು.

ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರ ಶ್ರೀನಿವಾಸ್ ಹೆಚ್.ಬಿ ಅವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ಮತ್ತು ಎಚ್‌ಓಡಿ ಆಫ್ ಕಾಮರ್ಸ್ ಡಿಪಾರ್ಟ್‌ಮೆಂಟ್ ಆಗಿರುವ ಸುನೀತಾ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಸುಳ್ಯ ಅಮೂಲ್ಯ ಸಾಕ್ಷಾರತಾ ಕೇಂದ್ರದ ಆರ್ಥಿಕ ಸಾಕ್ಷರತಾ ಸಲಹೆಗಾರರಾಗಿರುವ ಸುಜಾತರವರು ಆತ್ಮನಿರ್ಭರ ಭಾರತದ ಯೋಜನೆಯಡಿಯಲ್ಲಿ ಬರುವಂತಹ ಯೋಜನೆಗಳ ಮಾಹಿತಿಯನ್ನು ನೀಡಿದರು. ಕಾಲೇಜಿನ ಪ್ರಾಂಶುಪಾಲ ರಾಘವ ಎನ್ ಶುಭಹಾರೈಸಿದರು. ವೇದಿಕೆಯಲ್ಲಿ ಸ್ಟೂಡೆಂಟ್ ವೆಲ್ಪೇರ್ ಆಫೀಸರ್ ಯತೀಶ್ ಕುಮಾರ್, ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷರು, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರೂ ಆಗಿರುವ ಗೌತಮ್‌ರಾಜ್ ಕರಂಬಾರು, ತಾಲೂಕು ಸಂಯೋಜಕಿ ಪ್ರಜ್ಞಾ ಕುಲಾಲ್ ಕಾವು ಉಪಸ್ಥಿತರಿದ್ದರು.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವೃಂದ ಹಾಗೂ ಷಣ್ಮುಖ ಯುವಕ ಮಂಡಲದ ಸದಸ್ಯರು, ಶಿಕ್ಷಕರ ವೃಂದ ಭಾಗವಹಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಜ್ಞಾ ಕುಲಾಲ್ ಕಾವು ಸ್ವಾಗತಿಸಿದರು. ಬಿ.ಕಾಂ ವಿದ್ಯಾರ್ಥಿನಿ ಭವ್ಯ ಕಾರ್ಯಕ್ರಮ ನಿರೂಪಿಸಿದು.

LEAVE A REPLY

Please enter your comment!
Please enter your name here