ಸುಳ್ಯ : ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ವಿಶೇಷ ಕ್ಯಾಂಪ್

0

 

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ವಿಶೇಷ ಕ್ಯಾಂಪ್ ವಿಕಲ ಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಜಂಟಿಯಾಗಿ ಅ. 11 ರಂದು ನಡೆಯಿತು.

 

ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಮೇಲ್ವಿಚಾರಕರಾದ ಪ್ರವೀಣ್ ನಾಯಕ್, ಬೆಳ್ಳಾರೆ ಪಂಚಾಯತ್ ನ ವಿ.ಆರ್ ಡಬ್ಲ್ಯೂ ಪುಷ್ಪಶ್ರೀ, ಆರಂತೋಡಿನ ಹರಿಣಿ, ಹರಿಹರ ದ ಆಶೀಸ್, ಮರ್ಕಂಜ ಪಂಚಾಯತ್ ನ ಷಣ್ಮುಖ, ಐವರ್ನಾಡು ಪಂಚಾಯತ್ ನ ಉಮಾವತಿ, ಬಾಳಿಲ ಪಂಚಾಯತ್ ನ ಕೃಷ್ಣ ಪ್ರಸಾದ್, ದೇವಚಳ್ಳ ಪಂಚಾಯತ್ ನ ದಿನೇಶ್, ಮೀನಾಕ್ಷಿ ಪಂಜ, ಜಗದೀಪ್, ಕಳಂಜ ಆರೋಗ್ಯ ಇಲಾಖೆಯ ಬಸವರಾಜ್, ದಾದಿ ನಯನ, ಮೊದಲಾದವರಿದ್ದರು.


ಡಾ. ಕರುಣಾಕರ್ ನೇತ್ರತ್ವದಲ್ಲಿ ಡಾ.ಅರ್ಚನಾ, ಡಾ.ಸೌಮ್ಯ, ಮತ್ತಿತರ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ಇದರ ಪ್ರಯೋಜನ ಪಡೆದು ಕೊಂಡರು.

LEAVE A REPLY

Please enter your comment!
Please enter your name here