ಕಲ್ಲುಗುಂಡಿ : ಪರಿಹಾರಧನ ವಿತರಣೆ

0

ದ. ಕ. ಸಂಪಾಜೆಯ ಕಲ್ಲುಗುಂಡಿಯಲ್ಲಿ ಎರಡು ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅನಾಹುತಕ್ಕೆ ಒಳಗಾದ ಹೋಟೆಲ್ ಮಾಲಕರಾದ ಆನಂದ ಏಣಿಯಾರ್ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಹಾರ ರೂಪದಲ್ಲಿ ರೂ 10,000ವನ್ನು ವಿತರಿಸಲಾಯಿತು. ಇವರು ಕೊಡಗು ಸಂಪಾಜೆ ವಲಯದ ಯು ಚೆಂಬು ಒಕ್ಕೂಟದ ವಿವೇಕ ಪ್ರಗತಿ ಬಂಧು ತಂಡದ ಸದಸ್ಯರಾಗಿರುತ್ತಾರೆ. ಯೋಜನಾಧಿಕಾರಿಗಳಾದ ದಿನೇಶ್ ರವರು ಪರಿಹಾರ ಚೆಕ್ ವಿತರಿಸಿದರು. ಈ ಸಂಧರ್ಭ ಚೆಂಬು ಗ್ರಾಮಪಂಚಾಯತ್ ಅಧ್ಯಕ್ಷರಾದ ಕುಸುಮ, ವಲಯ ಮೇಲ್ವಿಚಾರಕರಾದ ಜಯಶ್ರೀ, ಒಕ್ಕೂಟದ ಅಧ್ಯಕ್ಷರಾದ ಕೃಷ್ಣವೇಣಿ, ಸೇವಾಪ್ರತಿನಿಧಿ ಆರತಿ ಕಟ್ಟಡ ಮಾಲೀಕರಾದ ಮೊಹಮ್ಮದ್ ಕುಂಜಿ, ಶ್ರೀನಿವಾಸ್ ನಿಡಿಂಜಿ, ಚಿದಾನಂದ. ಎನ್ ಹೆಚ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here