ತಿಂಗಳಾಡಿ: ಹೆಚ್ಚಳಗೊಂಡ ಕಳ್ಳತನ ಪ್ರಕರಣ-ಕೆಟ್ಟು ಹೋಗಿರುವ ಸಿ.ಸಿ ಕ್ಯಾಮರಾ ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐನಿಂದ ಗ್ರಾ.ಪಂಗೆ ಮನವಿ

0

ಪುತ್ತೂರು: ತಿಂಗಳಾಡಿ ಜಂಕ್ಷನ್‌ನಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮೆರಾ ಕೆಟ್ಟು ಹೋಗಿದ್ದು ಅದನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಎಸ್.ಡಿ.ಪಿ.ಐ ತಿಂಗಳಾಡಿ ಬೂತ್ ಸಮಿತಿ ವತಿಯಿಂದ ಮಾ.೩ರಂದು ಕೆದಂಬಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಯಿತು.

 


ತಿಂಗಳಾಡಿ ಪರಿಸರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ತಿಂಗಳಾಡಿ ಜಂಕ್ಷನ್ ಬಳಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮರಾ ಕಾರ್ಯ ನಿರ್ವಹಿಸದೇ ಇರುವುದು ಕಳ್ಳರಿಗೆ ವರದಾನವಾಗಿದೆ. ಈ ನಿಟ್ಟಿನಲ್ಲಿ ಗ್ರಾ.ಪಂ ಕೂಡಲೇ ಸಿ.ಸಿ ಕ್ಯಾಮರಾವನ್ನು ದುರಸ್ತಿಗೊಳಿಸುವ ಮೂಲಕ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು ಎಸ್.ಡಿ.ಪಿ.ಐ ಮುಖಂಡ ನೌಶಾದ್ ತಿಂಗಳಾಡಿ ಮತ್ತು ಕಾರ್ಯಕರ್ತರು ಮನವಿ ನೀಡುವ ನಿಯೋಗದಲ್ಲಿದ್ದರು.

LEAVE A REPLY

Please enter your comment!
Please enter your name here