ಅ.16: ಕನಕಮಜಲು ಸಹಕಾರಿ ಸಂಘದ ಶತಸಂಭ್ರಮ ಹಿನ್ನೆಲೆ

0

ನಾಳೆ ಸಹಕಾರಿ ಸಂಘದ ವತಿಯಿಂದ ಬೃಹತ್ ವಾಹನ ಜಾಥ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಸಂಭ್ರಮ ಕಾರ್ಯಕ್ರಮವು ಅ.16ರಂದು ಜರುಗಲಿದ್ದು, ಆ ಪ್ರಯುಕ್ತ ಬೃಹತ್ ವಾಹನ ಜಾಥವು ನಾಳೆ (ಅ.13) ಜರುಗಲಿದೆ.
ಸಹಕಾರಿ ಸಂಘದ ಶತಮಾನೋತ್ಸವದ ಪ್ರಚಾರಾರ್ಥವಾಗಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಜಾಥವು ಅ. 13ರಂದು ಬೆಳಿಗ್ಗೆ 9.30ಕ್ಕೆ ಕನಕಮಜಲಿನ ಪ್ರಧಾನ ಕಚೇರಿಯಿಂದ ಹೊರಟು ಜಾಲ್ಸೂರು, ಅಡ್ಕಾರು , ಅಡ್ಕಾರುದೇವಸ್ಥಾನ, ಪೇರಾಲು, ಮಂಡೆಕೋಲು, ಅಜ್ಜಾವರ, ಸುಳ್ಯ, ಪೈಚಾರು,ಸೋಣಂಗೇರಿ, ಜಾಲ್ಸೂರು ಮಾರ್ಗವಾಗಿ ಕನಕಮಜಲಿಗೆ ಹಿಂತಿರುಗಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here