ಅ.16: ಕನಕಮಜಲು ಸಹಕಾರಿ ಸಂಘದ ಶತಸಂಭ್ರಮ ಹಿನ್ನೆಲೆ

0

 

ಸಹಕಾರಿ ಸಂಘದ ವತಿಯಿಂದ ಬೃಹತ್ ವಾಹನ ಜಾಥ

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಸಂಭ್ರಮ ಕಾರ್ಯಕ್ರಮವು ಅ.16ರಂದು ಅಡ್ಕಾರಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಜರುಗಲಿದ್ದು, ಆ ಪ್ರಯುಕ್ತ ಬೃಹತ್ ವಾಹನ ಜಾಥವು ಆ
13ರಂದು ಬೆಳಿಗ್ಗೆ ಜರುಗಿತು.

 

ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಗೋಪಾಲಕೃಷ್ಣ ಭಟ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಿದರು.
1918ರಲ್ಲಿ ಸ್ಥಾಪನೆಗೊಂಡ ಕನಕಮಜಲು ಸಹಕಾರಿ ಸಂಘವು ಶತ ಸಂವತ್ಸರಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು, ಶತಮಾನೋತ್ಸವದ ಪ್ರಚಾರಾರ್ಥವಾಗಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಜಾಥವು ಕನಕಮಜಲಿನ ಪ್ರಧಾನ ಕಚೇರಿಯಿಂದ ಹೊರಟು ಜಾಲ್ಸೂರು, ಅಡ್ಕಾರು , ಅಡ್ಕಾರುದೇವಸ್ಥಾನ, ಪೇರಾಲು, ಮಂಡೆಕೋಲು, ಅಜ್ಜಾವರ, ಸುಳ್ಯ, ಪೈಚಾರು,ಸೋಣಂಗೇರಿ, ಜಾಲ್ಸೂರು ಮಾರ್ಗವಾಗಿ ಕನಕಮಜಲಿಗೆ ಹಿಂತಿರುಗಿತು.


ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನಿರ್ದೇಶಕರುಗಳಾದ ಕರುಣಾಕರ ರೈ ಕುಕ್ಕಂದೂರು, ಗಣೇಶ್ ಅಂಬಾಡಿಮೂಲೆ, ಶ್ರೀಕೃಷ್ಣ ಭಟ್ ನೆಡಿಲು, ಸೀತಾರಾಮ ಮಠ, ಸುಖೇಶ್ ಅಡ್ಕಾರುಪದವು, ಶೇಷಪ್ಪ ನಾಯ್ಕ ಕಜೆಗದ್ದೆ, ಮಹೇಶ್ವರ ಕಾರಿಂಜ, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಭಾರತಿ ಕಜೆಗದ್ದೆ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ ಸೇರಿದಂತೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ – ಉಪಾಧ್ಯಕ್ಷರುಗಳು, ಮಾಜಿ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಸೇರಿದಂತೆ ಜಾಲ್ಸೂರು ಹಾಗೂ ಕನಕಮಜಲಿನ ಗ್ರಾಮಸ್ಥರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here