ಐವರ್ನಾಡು : ಸಮಗ್ರ ಸಂಜೀವಿನಿ ಒಕ್ಕೂಟದ ಮಾಸಿಕ‌ ಸಭೆ

0

 

ಸಮಗ್ರ ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯು ಅ.10 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷರಾಗಿ ರೇವತಿ ಬೋಳುಗುಡ್ಡೆ, ಎನ್.ಆರ್.ಎಲ್
.ಎಂ ಸುಳ್ಯ ಟಿಪಿಎಂ ಆಗಿರುವ ಇವರು ಗ್ರಾಮೀಣ ಬಡತನ ನಿರ್ಮೂಲನೆ ಮತ್ತು ಉದ್ಯಮಶೀಲತೆ ಯ ಬಗ್ಗೆ ಮಾಹಿತಿ ನೀಡಿದರು.

ಎಲ್ಲ ಬ್ಯಾಂಕ್ ಗಳ ಪ್ರತಿನಿಧಿ ಯಾಗಿರುವ ಸುಜಾತರವರು ಹಲವು ಯೋಜನೆ, ಮೊಬೈಲ್ ಗಳಿಗೆ ಬರುವ ಒಟಿಪಿ, ಫೋನ್ ಕರೆ ಗಳ ಮುಂಜಾಗೃತಿಯ ಮಾಹಿತಿ ನೀಡಿದರು “ಅಮ್ಮ ನಿಗಾಗಿ ಒಂದು ಪುಸ್ತಕ “ಅಭಿಯಾನದ ಬಗ್ಗೆ ಗ್ರಂಥಪಾಲಕಿ ಮಾಹಿತಿ ನೀಡಿದರು.
ಗ್ರಾಮ ಪಂಚಾಂಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಹಲವಾರು ವಿಷಯ ಗಳನ್ನು ಪ್ರಸ್ತಾಪಿಸಿದರು.
ಶಾಲಾ ಮಕ್ಕಳು ಡ್ರಾಯಿಂಗ್ ಬಿಡಿಸಿದರು.
ಚದುರಂಗ ಆಟ ಆಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಜಾತಾ ಪವಿತ್ರ ಮಜಲು ಹಾಗೂ ಎಂ.ಬಿ.ಕೆ
ಎಲ್.ಸಿ.ಆರ್.ಪಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು
ಇದರ ಜೊತೆ ಉಚಿತ ಬಿಪಿ, ಶುಗರ್ ನ್ನು ಸಮುದಾಯದ ಆರೋಗ್ಯ ಅಧಿಕಾರಿಯಾಗಿರುವ ಶ್ರೀಮತಿ ವೀಣಾ ಮತ್ತು ಆಶಾ ಕಾರ್ಯಕರ್ತರು ಸುಂದರಿ ಪಿ. ಕೆ ಯವರು ಪರೀಕ್ಷೆ ಮಾಡಿದರು.

LEAVE A REPLY

Please enter your comment!
Please enter your name here