ಸುಳ್ಯದಲ್ಲಿ ಶೃಂಗೇರಿಮಹಾಸಂಸ್ಥಾನದ ಗುರುದೇವತಾ ಭಜನಾ ಮಂಜರಿ ಕಮ್ಮಟದ ಪೂರ್ವ ಭಾವಿ ಸಭೆ- ಸಮಿತಿ ರಚನೆ

0

 

 

ಶೃಂಗೇರಿ
ಶ್ರೀ ಶ್ರೀ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನದ ಆಶ್ರಯದಲ್ಲಿ ಸುಳ್ಯ ಸುಬ್ರಹ್ಮಣ್ಯ ಭಜನಾ ಮಂಡಳಿಯ ಆಯೋಜನೆಯಲ್ಲಿ ಅ.30 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಶ್ರೀ ಗುರುದೇವತಾ ಭಜನಾ ಮಂಜರಿ ಒಂದು ದಿನದ ಭಜನಾ ಕಮ್ಮಟದ ಪೂರ್ವ ಭಾವಿ ಸಭೆಯು ಅ.13 ರಂದು ಚೆನ್ನಕೇಶವ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನದಡಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಶೃಂಗೇರಿಯ ಭಜನಾ ಪದ್ಧತಿಯನ್ನು ಕಲಿಯುವ ಹಾಗೂ ಕಲಿಸುವ ಬೃಹತ್ ಅಭಿಯಾನವು ಪರಮಪೂಜ್ಯ ಸ್ವಾಮೀಜಿಯವರು ಆಶೀರ್ವಾದದೊಂದಿಗೆ ನಡೆಯಲಿದ್ದು ಸುಳ್ಯದಲ್ಲಿಯೂ ನಡೆಯಲಿದೆ.


ಇದರ ಪೂರ್ವ ಭಾವಿ ಸಭೆಯಲ್ಲಿ ಭಜನಾ ಕಮ್ಮಟದ ಸಮಿತಿಯನ್ನು ರಚಿಸಲಾಯಿತು.
ಸಂಚಾಲಕರಾಗಿ ಶ್ರೀಮತಿ ಶಶಿಕಲಾ ಹರಪ್ರಸಾದ್ ತುದಿಯಡ್ಕ, ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಕಾರ್ಯದರ್ಶಿ ಕೃಷ್ಣ ರಾವ್ ಇಂಜಿನಿಯರ್, ಕೋಶಾಧಿಕಾರಿ ಅಶೋಕ ಪ್ರಭು, ಉಪಾಧ್ಯಕ್ಷ ಡಾ.ಸದಾಶಿವ ರಾವ್ ಸುಳ್ಯ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಆಲೆಟ್ಟಿ, ನಿರ್ದೇಶಕರಾಗಿ ಭಾಸ್ಕರ ರಾವ್ ಬಯಂಬು, ಕುಮಾರಸ್ವಾಮಿ ರೆಂಜಾಳ, ಅರುಣ್ ಕುಮಾರ್ ನೆಲ್ಲಿಕುಂಜೆ, ಸತೀಶ್ ರಾವ್ ದಾಸರಬೈಲು, ಶ್ರೀಮತಿ ಉಮಾಜೋಶಿ,ಶ್ರೀಮತಿ ಸುಜಾತ ಎನ್, ಲಕ್ಷ್ಮೀ ನಾರಾಯಣ ರಾವ್ ರೆಂಜಾಳ, ವಿದ್ಯಾ ಬೇರಿಕೆ ಇವರನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ಶಶಿಕಲಾ ಸ್ವಾಗತಿಸಿದರು. ಕೃಷ್ಣ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here