ಪುತ್ತೂರು ಕೋಟಿ ಚೆನ್ನಯ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ, ನೀರಿನ ಟ್ಯಾಂಕ್ ಉದ್ಘಾಟನೆ

0

  • ಪುತ್ತೂರು ಕಂಬಳವು ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಿಸುವಂತಾಗಿದೆ – ಕೇಶವ ಪ್ರಸಾದ್ ಮುಳಿಯ

ಪುತ್ತೂರು : ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಮಾ.19, 20ರಂದು ನಡೆಯುವ ಪುರಾತನ ಜಾನಪದ ಕ್ರೀಡೆಯಾದ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಾ.4ರಂದು ದೇವಾಲಯದ ಕಂಬಳಗದ್ದೆಯಲ್ಲಿ ನಡೆಯಿತು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಯುವಕರಲ್ಲಿ ವಿಶೇಷ ಆಸಕ್ತಿ ಮೂಡಿಸುವ ಸಾಂಸ್ಕೃತಿಕ ಜಾನಪದ ಕ್ರೀಡೆಯಾದ ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಕಂಬಳವು ರಾಜ್ಯಮಟ್ಟದಲ್ಲಿ ದಾಖಲೆ ನಿರ್ಮಿಸುವಂತಾಗಿದೆ ಎಂದು ಅವರು ಹೇಳಿದರು. ಪುತ್ತೂರಿನಲ್ಲಿ ಕಳೆದ 29 ವರ್ಷಗಳಿಂದ ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳವು ದಾಖಲೆ ಮಟ್ಟದ ಜನರನ್ನು ಆಕರ್ಷಿಸುವ ಕ್ರೀಡೆಯಾಗಿದೆ. ಈ ಕ್ರೀಡೆ ಯಶಸ್ವಿಯಾಗಿ ಮುನ್ನಡೆಯಾಗಲಿ ಎಂದು ಹೇಳಿ ಇದರ ಯಶಸ್ಸಿಗೆ ಸಹಕರಿಸಿದ ಮಹನೀಯರನ್ನು ಸ್ಮರಿಸಿದರು. ಶೀಘ್ರದಲ್ಲಿ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ಗೋಶಾಲೆ, ರಥಮಂದಿರ, ಆವರಣ ಗೋಡೆ, ಅನ್ನಛತ್ರವನ್ನು ಶೀಘ್ರವಾಗಿ ನಿರ್ಮಿಸಲಾಗುವುದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಪುತ್ತೂರು ಕಂಬಳ ಜನಮಾಸದ ಕಂಬಳವಾಗಿದೆ : ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಪುತ್ತೂರು ಜೋಡುಕರೆ ಕಂಬಳ ಜನಮಾಸದ ಕಂಬಳವಾಗಿದೆ. ಇದರ ಯಶಸ್ಸು, ಕೀರ್ತಿ, ಮಹಾಲಿಂಗೇಶ್ವರ ದೇವರಿಗೆ ಅರ್ಪಣೆಯಾಗಲಿದೆ ಎಂದ ಅವರು ಕಂಬಳದ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಕಂಬಳ ಸಮಿತಿ ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ ಮಾತನಾಡಿ ಪುತ್ತೂರು ಕಂಬಳವು ಮೂರು ಜಿಲ್ಲೆಗಳಲ್ಲಿ ಶ್ರೇಷ್ಠ ಕಂಬಳವಾಗಿ ಶ್ರೀಮಹಾಲಿಂಗೇಶ್ವರನ ಅನುಗ್ರಹದಿಂದ ಮೂಡಿಬಂದಿದೆ. ಇದಕ್ಕೆ ಪೂರಕವಾಗಿ ಬರುವ ಕೋಣಗಳಿಗೆ ವ್ಯವಸ್ಥಿತ ನೀರಿನ ಅಗತ್ಯವಿದೆಯೆಂದು ಕೋಣಗಳ ಮಾಲಕರ ಬೇಡಿಕೆಯನ್ನು ಕಲ್ಪವಾಗಿ ಪೂರೈಸಲು ಕೋಟಿ ಚೆನ್ನಯ ಕಂಬಳ ಸಮಿತಿ ಸನ್ನದ್ದರಾಗಿ ನೀರಿನ ಟ್ಯಾಂಕ್ ನಿರ್ಮಿಸಿದೆ. ಈ ನೀರಿನ ಟ್ಯಾಂಕ್ ಎರಡು ದಿನ ನಡೆಯುವ ಪುತ್ತೂರು ಕಂಬಳದ ಕೋಣಗಳಿಗೆ ಮೀಸಲಾಗಿರಿಸಿದ್ದು ಉಳಿದ ದಿನಗಳಲ್ಲಿ ದೇವಸ್ಥಾನದ ಯಾವುದೇ ರೀತಿಯ ಪೂರ್ವಯೋಜನೆಗಳಿಗೆ ಪೂರಕವಾಗಿ ಇದನ್ನು ಬಳಸಲು ಸಹಕಾರಿಯಾಗಲಿದೆ ಎಂದರು. ಆಮಂತ್ರಣ ಪತ್ರಿಕೆ ಬಿಡುಗಡೆಯ ಮೊದಲು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ವಸಂತ್ ಕುಮಾರ್ ರೈ ಜೆ.ಕೆ., ಪ್ರವೀಣ್ ಚಂದ್ರ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ರೋಶನ್ ರೈ ಬನ್ನೂರು, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಸದಸ್ಯ ಶೇಖರ ನಾರಾವಿ, ಪದಾಧಿಕಾರಿಗಳಾದ ಪ್ರೇಮಾನಂದ ನಾಕ್, ಜಯಪ್ರಕಾಶ್ ಬದಿನಾರು, ವಿಲ್ಫರೆಡ್ ಫೆರ್ನಾಂಡೀಸ್, ಧೀರಜ್ ಕೋಡಿಪ್ಪಾಡಿ, ಯತೀಶ್ ಶೆಟ್ಟಿ ಕೋಡಿಂಬಾಡಿ, ಸುದೇಶ್ ಕುಮಾರ್, ದುರ್ಗಾಪ್ರಸಾದ್ ರೈ ಕುಂಬ್ರ, ಪ್ರಶಾಂತ್ ಮುರ, ಸುಧಾಕರ್ ಶೆಟ್ಟಿ ಮಿತ್ತೂರು, ಯೋಗೀಶ್ ಸಾಮಾನಿ, ಭವಿನ್, ಭಾಗ್ಯೇಶ್ ರೈ ಕೆಯ್ಯೂರು, ಗಂಗಾಧರ ಶೆಟ್ಟಿ ಕೈಕಾರ, ಸುದರ್ಶನ್ ನಾಕ್ ಕಂಪ, ವಿಕ್ರಂ ಶೆಟ್ಟಿ ಅಂತರ, ಗಣೇಶ್‌ರಾಜ್ ಬಿಳಿಯೂರು, ನೇಮಾಕ್ಷ ಸುವರ್ಣ, ಕೃಷ್ಣಪ್ರಸಾದ್ ಆಳ್ವ, ಮಂಜುನಾಥ ಗೌಡ ತೆಂಕಿಲ, ವಿಜೇತ್ ಬನ್ನೂರು, ಕಿರಣ್ ಡಿಸೋಜ ಬನ್ನೂರು, ಸಂತೋಷ್ ಸವಣೂರು, ರಂಜಿತ್ ಬಳಗಾರ, ಜಗದೀಶ್, ಉದ್ಯಮಿ ಭವಿನ್ ಸೌಜನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೀರಿನ ಟ್ಯಾಂಕ್ ಉದ್ಘಾಟನೆ : ಇದೇ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ವತಿಯಿಂದ ಕಂಬಳಗದ್ದೆಯ ಸಮೀಪ ಕೋಣಗಳಿಗೆ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ನೀರಿನ ಟ್ಯಾಂಕ್‌ನ ಉದ್ಘಾಟನೆ ನೆರವೇರಿಸಲಾಯಿತು. ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ತೆಂಗಿನಕಾಯಿ ಒಡೆಯುವ ಮೂಲಕ ನೀರಿನ ಟ್ಯಾಂಕ್ ಉದ್ಘಾಟಿಸಿ ಕಂಬಳದ ಕೋಣಗಳಿಗೆ ನೀರುಣಿಸಲು ನಿರ್ಮಿಸಿದ ನೀರಿನ ಟ್ಯಾಂಕ್ ಬಹಳ ಅತ್ಯಗತ್ಯವಾಗಿದ್ದು ದೇವರು ಕೂಡ ಸಂತೃಪ್ತಿಗೊಳ್ಳಲಿದ್ದಾರೆ ಎಂದರು.

LEAVE A REPLY

Please enter your comment!
Please enter your name here