ಕಡಬ:ಗ್ರಾಹಕರ ಸೋಗಿನಲ್ಲಿ ಬಂದು ವಾಶ್ ಬೇಸಿನ್ ಆರ್ಡರ್ ಮಾಡಿ ಟೈಲ್ಸ್ ಅಂಗಡಿಯಿಂದ ಹಣ ಕದ್ದ ಅಪರಿಚಿತರು

0

ಕಡಬ: ಇಲ್ಲಿನ ಕಳಾರದಲ್ಲಿರುವ ಟೈಲ್ಸ್ ಅಂಗಡಿಯೊಂದರಿಂದ ಕಾರಿನಲ್ಲಿ ಬಂದ ತಂಡವೊಂದು ಡ್ರವರ್ ನಲ್ಲಿದ್ದ ಒಂದುವರೆ ಲಕ್ಷ ಕದ್ದೊಯ್ದ ಘಟನೆ ಮಾ.4 ರಂದು ಮಧ್ಯಾಹ್ನ ನಡೆದಿದೆ.

ಕಳಾರದಲ್ಲಿರುವ ಹನುಮಾನ್ ಗ್ರಾನೈಟ್ ಅಂಗಡಿಗೆ ಬಂದ ಮೂವರ ತಂಡ ತಮಗೆ ಎಂಟು ವಾಶ್ ಬೇಸಿನ್ ಬೇಕೆಂದು ಅಂಗಡಿ ಮಾಲಕರಲ್ಲಿ ಹೇಳಿದ್ದರು. ಹೀಗಾಗಿ ಮಾಲಕರು ಗೋಡಾನ್ ಗೆ ತೆರಳಿದಾಗ ಇಬ್ಬರು ಮಾಲಕರೊಂದಿಗೆ ಗೋಡೌನ್ ಗೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ಮತ್ತೊರ್ವ ವ್ಯಕ್ತಿ ಬಂದು ಡ್ರವರ್ ನಲ್ಲಿದ್ದ ಹಣವನ್ನು ದೋಚಿರುವುದಾಗಿ ತಿಳಿದುಬಂದಿದೆ. ಮಾಹಿತಿ ತಿಳಿದ ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಕಾರು ಯಾವ ಕಡೆಯಿಂದ ಬಂದಿದೆ ಎಂಬುದರ ಬಗ್ಗೆ ತಿಳಿದು ಕೊಳ್ಳಲು ಸ್ಥಳೀಯ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

LEAVE A REPLY

Please enter your comment!
Please enter your name here