ಅ.23 : ಸುಳ್ಯ ಮರಾಟಿ ಯುವ ವೇದಿಕೆ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ

0

ಮರಾಟಿ ಸಮಾಜ ಸೇವಾ ಸಂಘ ಸುಳ್ಯ, ಮರಾಟಿ ಮಹಿಳಾ ವೇದಿಕೆ ಸುಳ್ಯ ಇದರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಮರಾಟಿ ಯುವ ವೇದಿಕೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮರಾಟಿ ಸಮುದಾಯ ಬಾಂಧವರಿಗಾಗಿ 8 ಜನರ ಸೀಮಿತವಿರುವ,450+5 ಕೆ.ಜಿ.ವಿಭಾಗದ ಪುರುಷರ ಮತ್ತು 7 ಜನರ ಸೀಮಿತವಿರುವ ಮಹಿಳೆಯರ ಅಂತರ್ ಜಿಲ್ಲಾ ಮಟ್ಟದ ಹಗ್ಗ ಜಗ್ಗಾಟ (ಇಂಟರ್ ಲಾಕ್) ಪಂದ್ಯಾಟ ಅ.23ರಂದು ಗಿರಿದರ್ಶಿನಿ ಮರಾಟಿ ಸಮುದಾಯ ಭವನ ಅಂಬಟೆಡ್ಕ ಸುಳ್ಯ ಇಲ್ಲಿ ನಡೆಯಲಿದೆ.
ಅ.23ರಂದು ಬೆಳಿಗ್ಗೆ 9 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನದವರೆಗೆ ಸುಳ್ಯ ತಾಲೂಕು ಮರಾಟಿ ಸಮುದಾಯದ ಪುರುಷರಿಗೆ ,ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆಯಲಿದೆ. ಮಧ್ಯಾಹ್ನ ಹಗ್ಗ ಜಗ್ಗಾಟ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು,ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದೆ.
ಬಹುಮಾನಗಳು ಪುರುಷ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ರೂ.5005,ದ್ವಿತೀಯ4004,ತೃತೀಯ2002,ಹಾಗೂ ಚತುರ್ಥ1001 ಮತ್ತು ಶಾಶ್ವತ ಫಲಕ,ಮಹಿಳೆಯರ ವಿಭಾಗದಲ್ಲಿ ಪ್ರಥಮ ರೂ4004,ದ್ವಿತೀಯ2002,ತೃತೀಯ 1001,ಚತುರ್ಥ 505 ಮತ್ತು ಶಾಶ್ವತ ಫಲಕ ನೀಡಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಮರಾಟಿ ಸಮುದಾಯದ ಗಣ್ಯರು,ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಇತರ ಗಣ್ಯರು ಭಾಗವಹಿಸಲಿದ್ದಾರೆ.ಪಂದ್ಯಾಟದ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7353756039,9900793497,9448932303 ಅನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here