ಬಿದ್ದು ಸಿಕ್ಕಿದ ಪರ್ಸ್‌ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಕೈಪಂಗಳ ದೋಳ ಬ್ರಹ್ಮಶ್ರೀ ಸೇವಾಬಳಗದ ಸದಸ್ಯರು

0

ಪುತ್ತೂರು: ನಗದು, ದಾಖಲೆಗಳಿದ್ದ ಬಿದ್ದು ಸಿಕ್ಕಿದ ಪರ್ಸ್‌ನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬ್ರಹ್ಮ ಶ್ರೀ ಸೇವಾಬಳಗ ಕೈಪಂಗಳ ದೋಳ ಇದರ ಸದಸ್ಯರು ಪ್ರಾಮಾಣಿಕತೆ ಮೆರೆದಿದ್ದಾರೆ. ಮಾ.5ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ಜಾತ್ರೊತ್ಸವ ಸಂದರ್ಭದಲ್ಲಿ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಪರ್ಸ್ ಬಿದ್ದು ಸಿಕ್ಕಿದ್ದು ಅದರಲ್ಲಿ ರೂ.3000 ಹಣ, ಎಟಿಎಂ ಹಾಗೂ ದಾಖಲೆಗಳಿದ್ದವು. ಪರ್ಸ್‌ನಲ್ಲಿ ಮೊಬೈಲ್ ನಂಬರ್ ಆಧಾರದಲ್ಲಿ ಕರೆ ಮಾಡಿದ ಯುವಕರು ಪರ್ಸ್‌ನ ವಾರಸುದಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಮಾ.6ರಂದು ಸುಭಾಸ್ ಕೊಂಬರಡ್ಕ ಎಂಬವರಿಗೆ ಗೆಜ್ಜೆಗಿರಿ ಕ್ಷೇತ್ರದಲ್ಲಿ ಪರ್ಸ್‌ನ್ನು ಹಿಂತಿರುಗಿಸಿದ್ದಾರೆ.


ಈ ಸಂದರ್ಭದಲ್ಲಿ ಬ್ರಹ್ಮ ಶ್ರೀ ಸೇವಾಬಳಗದ ಪ್ರಮುಖರಾದ ಸುಜಿತ್ ಅಂಚನ್ ದೋಳ, ಶರತ್ ಸಾಲ್ಯಾನ್ ದೋಳ, ಅಕ್ಷಯ್ ಕೋಟ್ಯಾನ್ ದೋಳ, ಮನೀಶ್ ಅಮೀನ್ ದೋಳ, ಜೀವನ್ ಬಂಗೇರ ದೋಳ, ಸುಜಯ್ ಕೋಟ್ಯಾನ್ ದೋಳ, ಮೋಹಿತ್ ಬರಮೇಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here