ಬೆಳ್ಳಾರೆಯಲ್ಲಿ ಶ್ರೀ ದುರ್ಗಾ ಫೂಟ್ ವೇರ್ಸ್ ಶುಭಾರಂಭ

0

 

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಶಾಹಿನ್ ಮಾಲ್ ನಲ್ಲಿ ಶ್ರೀಮತಿ ಭಾಗೀರಥಿ ಮತ್ತು ನಿವೃತ್ತ ಸೈನಿಕರಾದ ಚಂದ್ರಶೇಖರ ಪಾಟಾಳಿ ಯವರ ಮಾಲಕತ್ವದ ಶ್ರೀ ದುರ್ಗಾ ಫೂಟ್ ವೇರ್ಸ್ ಅ.15 ರಂದು ಶುಭಾರಂಭ ಗೊಂಡಿತು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಪಾದರಕ್ಷೆ ಮಳಿಗೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯರಾದ ಕುಂಬ್ರ ದಯಾಕರ ಆಳ್ವ,ಬೆಳ್ಳಾರೆ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ರಾಜೀವಿ ಆರ್ ರೈ ಪುಡ್ಕಜೆ ದರ್ಖಾಸ್, ಉದ್ಯಮಿ ಮಾಧವ ಗೌಡ ಬೆಳ್ಳಾರೆ, ಪಂ.ಸದಸ್ಯ ಅನಿಲ್ ರೈ ಚಾವಡಿಬಾಗಿಲು, ಸಂಘಟಕ ಪ್ರದೀಪ್ ಕುಮಾರ್ ರೈ ಪನ್ನೆ,ಹಿರಿಯ ಉದ್ಯಮಿ ಮಂಜಪ್ಪ ರೈ , ಹಿರಿಯ ರಾದ ರಾಮ ಪಾಟಾಳಿ ಬಿಳಿಯಾರು, ಜಗನ್ನಾಥ ಆಳ್ವ ಕಲ್ಲೋಣಿ, ಗಂಗಾಧರ ರೈ ಪುಡ್ಕಜೆ, ಪ್ರಗತಿ ಎಂಟರ್ ಪ್ರೈಸಸ್ ಪಾಲುದಾರ ಮಹಮ್ಮದ್ ಉಪಸ್ಥಿತರಿದ್ದರು.


ಸಂಸ್ಥೆಯ ಮಾಲಕರ ಬಂಧು ಮಿತ್ರರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಮಾಲಕ ನಿವೃತ್ತ ಸೈನಿಕ ಚಂದ್ರಶೇಖರ ಪಾಟಾಳಿ ಯವರು ಸರ್ವರನ್ನೂ ಸ್ವಾಗತಿಸಿದರು. ಸಂಜಯ್ ನೆಟ್ಟಾರ್ ಕಾರ್ಯಕ್ರಮ ನಿರ್ವಹಿಸಿದರು.
ನೂತನ ಪಾದರಕ್ಷಾ ಮಳಿಗೆಯಲ್ಲಿ ವಿವಿಧ ಪ್ರಸಿದ್ಧ ಕಂಪೆನಿಯ ಪಾದರಕ್ಷೆಗಳ ಸಂಗ್ರಹವಿರುವುದಾಗಿ ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here