ಉನ್ನತ ವ್ಯಾಸಂಗಕ್ಕಾಗಿ ಸುಕೃತಿ ಪಿ.ಕೆ. ವಿದೇಶಕ್ಕೆ

0

 

 

ಸುಳ್ಯ ಬೀರಮಂಗಲ ನಿವಾಸಿ ಪಾಲ್ತಾಡು ಮನೆ ಕೃಷ್ಣಪ್ಪ ಗೌಡ ಕೆ. ಮತ್ತು ಶ್ರೀಮತಿ ಸುಜಯಕೃಷ್ಣ ದಂಪತಿಯ ಪುತ್ರಿ ಸುಕೃತಿ ಪಿ.ಕೆ. Master in Data science and its aplication ವ್ಯಾಸಂಗಕ್ಕಾಗಿ ಲಂಡನ್ ಗೆ ತೆರಳಲಿದ್ದಾರೆ.
ಅವರು ಎಸ್ ಎಸ್ ಎಲ್ ಸಿ ವ್ಯಾಸಂಗವನ್ನು ಸುಳ್ಯದ ಸೈಂಟ್ ಜೋಸೆಫ್ ಶಾಲೆಯಲ್ಲಿ, ದ್ವಿತೀಯ ಪಿಯುಸಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ, ಇಂಜಿನಿಯರಿಂಗ್ ಪದವಿಯನ್ನು ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೂರೈಸಿ ಬೆಂಗಳೂರಿನ ಮೈಕ್ರೋ ಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಇವರ ತಂದೆ ಕೃಷ್ಣಪ್ಪ ಗೌಡ ಮಾಜಿ ಸೈನಿಕರು. ತಾಯಿ ಸುಜಯಕೃಷ್ಣ ಗೃಹಿಣಿ ಹಾಗೂ ತಂಗಿ ಸಂಸ್ಕೃತಿ ಮೈಸೂರಿನ ಮೈಟ್ ಕಾಲೇಜಿನಲ್ಲಿ ಬಿಇ ನಾಲ್ಕನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here