ಮಾಣಿಲ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ  

0

ವಿಟ್ಲ: ಮಾಣಿಲ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿಯ ವಾರ್ಷಿಕೋತ್ಸವ  ಹಾಗೂ 31ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.


ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ‌ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಹಿಂದು ಧರ್ಮ  ನಿರ್ಣಾಯಕ ಘಟ್ಟದಲ್ಲಿದೆ. ಲವ್ ಜಿಹಾದ್, ಡ್ರಗ್ಸ್ ಮಾಫಿಯಾ,ಮತಾಂತರ ಮುಂತಾದ ಆಂತರಿಕ ದಾಳಿ ಗಳಿಂದ ಜಾಗರೂಕವಾಗಿ ಹೊರಬರಬೇಕಾಗಿದೆ. ಅದಕ್ಕಾಗಿ ನಮ್ಮ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವ ಕೆಲಸವಾಗಬೇಕಾಗಿದೆ. ಮನೆ ಮನೆಗಳಲ್ಲಿ ಭಜನೆ, ಸತ್ಸಂಗದಂತಹ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ. ಭಜನಾ ಮಂದಿರಗಳ ಮುಂದಾಳತ್ವದಲ್ಲಿ  ಇಂತಹ ಸಂಸ್ಕಾರಯುತ ಕಾರ್ಯಕ್ರಮಗಳು ನಡೆಯಬೇಕಾಗಿದೆ. ಸಾಮೂಹಿಕ ಕಾರ್ಯಕ್ರಮ ಗಳೂ  ನಮ್ಮಲ್ಲಿನ ಭಿನ್ನತೆಗಳನ್ನು ಹೋಗಲಾಡಿಸುತ್ತವೆ ಎಂದರು.

ವೇದಿಕೆಯಲ್ಲಿ ವೇದಮೂರ್ತಿ  ಸುನಿಲ್ ಭಟ್ ಉಪಸ್ಥಿತರಿದ್ದರು. ಬೆಳಿಗ್ಗೆ ಗಣಪತಿ ಹವನ ನಡೆದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕೋಳ್ಯೂರುಪದವು ಶ್ರೀ ಸತ್ಯನಾರಾಯಣ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.  ಭಜನಾ ಮಂದಿರದ ಅಧ್ಯಕ್ಷ ಶ್ರವಣ್ ಕುಮಾರ್ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್  ವಂದಿಸಿದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here