ವಿಟ್ಲ ಪಡ್ನೂರು:  ಕಿಂಡಿ ಅಣೆಕಟ್ಟು,  ಸಂಪರ್ಕ ಸೇತುವೆ ಕಾಮಗಾರಿಗೆ ಬಂಟ್ವಾಳ ಶಾಸಕರಿಂದ ಶಿಲನ್ಯಾಸ

0

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಮೂರ್ಕಜೆ ಎಂಬಲ್ಲಿ ರೂ.2.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟು ಹಾಗೂ ಸಂಪರ್ಕ ಸೇತುವೆ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ  ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಬಂಟ್ವಾಳ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಮಾಧವ ಮಾವೆ, ವಿಟ್ಲಪಡ್ನೂರು ಗ್ರಾ.ಪಂ. ಅಧ್ಯಕ್ಷೆ ರೇಶ್ಮಾಶಂಕರಿ ಬಳಿಪಗುಳಿ, ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ,  ಬಳಿಪಗುಳಿ ಇಕೋಬ್ಲಿಸ್ ನ  ಮಾಲಕರಾದ ರಾಜಾರಾಮ್ ಭಟ್ ಬಳಿಪಗುಳಿ, ವಿಟ್ಲ-ಪಡ್ನೂರು ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು, ಕೊಳ್ನಾಡು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ವಿಟ್ಲ-ಪಡ್ನೂರು ಶಕ್ತಿಕೇಂದ್ರದ ಪ್ರಮುಖ್ ಸತೀಶ್ ಭಟ್ ಪಂಜಿಗದ್ದೆ,  ವಿಟ್ಲ-ಪಡ್ನೂರು ಗ್ರಾ.ಪಂ ಸದಸ್ಯರಾದ ಅಮಿತಾ ಗೌಡ, ರೇಖಾ, ಭಾರತಿ, ಜಯಂತ ಪಿ., ಜಯಭಾರತಿ, ಹರಿಕಿಶೋರ್, ನೆಭಿಸ, ಬೂತ್ ಅಧ್ಯಕ್ಷರಾದ ಮನೋಜ್ ಕುಮಾರ್ ಗಾಣದಮನೆ, ವಿಜಯ ಪಿ ಪೂರ್ಲಪ್ಪಾಡಿ, ಮೂರ್ಕಜೆ ಮೈತ್ರೆಯಿ ಗುರುಕುಲಂನ ಜಗನ್ನಾಥ ಕಾಸರಗೋಡು, ಅಜಯ್ ಟ್ರಸ್ಟ್‌ ಕಾರ್ಯದರ್ಶಿ ರೂಪಲೇಖಾ, ಪ್ರಮುಖರಾದ ಅಭಿಷೇಕ್ ರೈ ರಾಧುಕಟ್ಟೆ, ಮೇಗಾಶ್ಯಾಂ, ಗೋವಿಂದ ಭಟ್,  ವೆಂಕಟರಮಣ ಭಟ್, ನೀಲೇಶ್ ಸಪಲ್ಯ,ಗಣೇಶ್ ಸಪಲ್ಯ, ಕಿರಣ್ ಆಳ್ವ, ರಮೇಶ್ ಶೆಟ್ಟಿ, ಅಬುಬಕ್ಕರ್, ಹಸೈನಾರ್, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ಪಿ‌ಡಿ.ಒ ಶ್ರೀಶೈಲ ಪಂಚಾಯತ್ ಕಾರ್ಯದರ್ಶಿ ಸುಜಯ ಪಿ. ಮೊದಲಾದವರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here