ಶಾಂತಿನಗರ ಮದರಸದಲ್ಲಿ ಮೀಲಾದ್ ಫೆಸ್ಟ್ ಮತ್ತು ಮಕ್ಕಳ ಪ್ರತಿಭಾ ಸಂಗಮ

0

 

ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ರಿ ನೂರುಲ್ ಇಸ್ಲಾಂ ಮದರಸ ಶಾಂತಿನಗರ ಇದರ ಆಶ್ರಯದಲ್ಲಿ ಮೀಲಾದ್ ಫೆಸ್ಟ್ 2022 ಇದರ ಅಂಗವಾಗಿ ಮೌಲಿದ್ ಪಾರಾಯಣ ಮತ್ತು ಮಕ್ಕಳ ಪ್ರತಿಭಾ ಸಂಗಮ ಅಕ್ಟೋಬರ್ 16 ರಂದು ಶಾಂತಿನಗರ ಮದರಸಾ ಸಭಾಂಗಣದಲ್ಲಿ ನಡೆಯಿತು.
ಸಂಜೆ 4 ಗಂಟೆಗೆ ಮದರಸ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಸಂಜೆ 7 ಗಂಟೆಗೆ ಪೈಚ್ಚಾರು ಮದರಸ ವಿದ್ಯಾರ್ಥಿಗಳಿಂದ ದಫ್ ಕಾರ್ಯಕ್ರಮ ನಡೆಯಿತು.
ನಂತರ ಮೊಗರ್ಪಣೆ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಕಾಫಿ ರವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮೊಗರ್ಪಣೆ ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ ಉದ್ಘಾಟಿಸಿದರು. ಶಾಂತಿನಗರ ಮದ್ರಸ ಕಮಿಟಿ ಅಧ್ಯಕ್ಷ ಹಾಜಿ ಪಳ್ಳಿ ಕುಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಮೊಗರ್ಪಣೆ ಹೆಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್, ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿ ಎಮ್ ಉಸ್ಮಾನ್, ಕೋಶಾಧಿಕಾರಿ ಮಹಮ್ಮದ್ ಆದರ್ಶ, ನಿರ್ದೇಶಕರಾದ ಎಸ್ ಸಂಸುದ್ದೀನ್ ಅರಂಬೂರು, ಪೈಜಾರು ಬದ್ರಿಯಾ ಜುಮಾ ಮಸ್ಜಿದ್ ಕತೀಬರಾದ ಮುನೀರ್ ಸಕಾಫಿ , ಅಧ್ಯಕ್ಷ ಟಿಎ ಶರೀಫ್, ಮೊದಲಾದವರು ಉಪಸ್ಥಿತರಿದ್ದರು.
ಮೊಗರ್ಪಣೆ ಮದರಸ ಅಧ್ಯಾಪಕರು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಸ್ಥಳೀಯ ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಜೈನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಮಿತಿಯ ಪದಾಧಿಕಾರಿಗಳು ಸದಸ್ಯರುಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here