ಹೊಸಮಜಲು ರಸ್ತೆ ಶ್ರಮದಾನದ ಮುಖಾಂತರ ತಾತ್ಕಾಲಿಕ ರಿಪೇರಿ

0

 

ಅಮರಮೂಡ್ನೂರು ಗ್ರಾ.ಪಂ ನ ಶೇಣಿ -ಹೊಸಮಜಲು- ತಂಟೆಪ್ಪಾಡಿ ರಸ್ತೆಯ ಹೊಸಮಜಲು ಎಂಬಲ್ಲಿ ರಸ್ತೆಯಲ್ಲಿ ಹೂಳು ತುಂಬಿ ಹೋಗದ ಪರಿಸ್ಥಿತಿ ಬಂದೊದಗಿತ್ತು. ಇತ್ತೀಚಿಗೆ ಗ್ರಾ.ಪಂನ ವಾರ್ಡ್ ಸಭೆಯಲ್ಲಿ ಈ ರಸ್ತೆ ದುಸ್ಥಿತಿಯ ಬಗ್ಗೆ ಚರ್ಚೆಯಾಗಿ ತುರ್ತು ಕಾಮಗಾರಿ ಮಾಡುವಂತೆ ನಿರ್ಧರಿಸಲಾಗಿತ್ತು. ಅದರಂತೆ ಮರಳು ಹಾಕಲು ಪಂಚಾಯತ್ ವತಿಯಿಂದ ರಸ್ತೆಯ ಮಣ್ಣು ತೆರವುಗೊಳಿಸಲಾಗಿ, ಮಣ್ಣು ತೆಗೆದು ರಸ್ತೆಗೆ ಮರಳು ಹಾಕದೆ ಹಾಗೇ ಬಿಟ್ಟ ಕಾರಣ ಇಲ್ಲಿನ ರಸ್ತೆಯಲ್ಲಿ ಮಳೆ ನೀರು ನಿಂತು ಮತ್ತೆ ಸಂಚಾರ ಮಾಡಲು ಆಗದಂತಹ ಪರಿಸ್ಥಿತಿ ಬಂದೊದಗಿತ್ತು. ಅ.೧೭ ರಂದು ಊರವರ ಶ್ರಮದಾನ ಸ್ಥಳೀಯ ಪಂಚಾಯತ್ ಸದಸ್ಯೆಯ ಸಹಕಾರದಲ್ಲಿ ತಾತ್ಕಾಲಿಕವಾಗಿ ಶ್ರಮದಾನದ ಮುಖಾಂತರ ಸಂಚಾರ ಯೋಗ್ಯ ಮಾಡಲಾಯಿತು.

LEAVE A REPLY

Please enter your comment!
Please enter your name here