ಸವಣೂರು ಸೀತಾರಾಮ ರೈಯವರ 75 ನೇ ಹುಟ್ಟು ಹಬ್ಬದ ಸಮಾಲೋಚನಾ ಸಭೆ

0

  • ಸೀತಾರಾಮ ರೈಯವರ ಸಾಕ್ಷ್ಯ ಚಿತ್ರಕ್ಕೆ ಚಾಲನೆ

ಪುತ್ತೂರು: ಸಹಕಾರಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಮುಖಂಡ ಸವಣೂರು ಕೆ.ಸೀತಾರಾಮ ರೈಯವರ75 ನೇ ಹುಟ್ಟು ಹಬ್ಬ ಜೂ.9 ರಂದು ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಹಾಗೂ ಸೀತಾರಾಮ ರೈಯವರ ಸಾಕ್ಷ್ಯಚಿತ್ರಕ್ಕೆ ಚಾಲನೆಯನ್ನು ನೀಡುವ ನಿಟ್ಟಿನಲ್ಲಿ ಸಾಕ್ಸ್ಯ ಚಿತ್ರದ ಬ್ಯಾನರ್ ಬಿಡುಗಡೆಯು ಮಾ. ೮ ರಂದು ಪುತ್ತೂರು ದರ್ಬೆ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ಜರಗಿತು.

 


ಹಿರಿಯ ಸಾಮಾಜಿಕ ಮುಂದಾಳು, ಸವಣೂರಿನ ಉದ್ಯಮಿ ಎನ್.ಸುಂದರ ರೈ ಸವಣೂರುರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸೀತಾರಾಮ ರೈ ಸಮಾಜದ ಆದರ್ಶ ವ್ಯಕ್ತಿ ಹೇಮನಾಥ ಶೆಟ್ಟಿ ಸೀತಾರಾಮ ರೈಯವರ ಸಾಕ್ಷ್ಯ ಚಿತ್ರದ ಬ್ಯಾನರ್ ಬಿಡುಗಡೆಯನ್ನುಗೊಳಿಸಿ, ಮಾತನಾಡಿದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಸೀತಾರಾಮ ರೈರವರ ೭೫ ನೇ ಹುಟ್ಟು ಹಬ್ಬ ಸಮಾಜಕ್ಕೆ ತುಂಬಾ ಸಂತೋಷ ತರುವ ಕ್ಷಣವಾಗಿದ್ದು, ಸೀತಾರಾಮ ರೈರವರು ನಮ್ಮ ಜಿಲ್ಲೆಯ ಆದರ್ಶ ವ್ಯಕ್ತಿಯಾಗಿದ್ದು, ಅವರ ಬದುಕು ಸಮಾಜಕ್ಕೆ ಮಾದರಿ ಎಂದರು.

ಸೀತಾರಾಮ ರೈಯವರ ಸಾಕ್ಷ್ಯ ಚಿತ್ರವನ್ನು ನಿರ್ಮಿಸಲಿರುವ ಸುಳ್ಯ ಸುದ್ದಿ ಚಾನೆಲ್ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆರವರು ಮಾತನಾಡಿ ಸೀತಾರಾಮ ರೈರವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಹಕಾರಿ ಕ್ಷೇತ್ರದ ಸಾಧನೆಯ ನೋಟದ ಬಗ್ಗೆ ಸುಮಾರು ೩೫ ನಿಮಿಷಗಳ ಸಾಕ್ಷ್ಯ ಚಿತ್ರವಾಗಿದ್ದು, ಇದರ ಚಿತ್ರೀಕರಣ ಎಪ್ರಿಲ್ ತಿಂಗಳನಿಂದ ಪ್ರಾರಂಭವಾಗಲಿದೆ. ಪುತ್ತೂರು ಹಾಗೂ ಸುಳ್ಯದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.

ಸಹಕಾರಿ ಧುರಿಣ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ ನನ್ನ ೭೫ ನೇ ಹುಟ್ಟು ಹಬ್ಬದ ಆಚರಣೆಗೆ ನೀವು ನೀಡುತ್ತಿರುವ ಸಲಹೆ, ಸೂಚನೆಗೆ ಕೃತಜ್ಞತೆ ಸಲ್ಲಿಸಿದರು. ಹುಟ್ಟು ಹಬ್ಬದ ಪ್ರಯುಕ್ತ ಸವಣೂರಿನಲ್ಲಿ ಅತೀ ಅಗತ್ಯವಾಗಿ ಬೇಕಾದ ಸಾರ್ವಜನಿಕ ಶೌಚಾಲಯ ಹಾಗೂ ಸ್ನಾನಗೃಹವನ್ನು ನಿರ್ಮಾಣ ಮಾಡಲಾಗುವುದು, ಅಲ್ಲದೇ ಜಿಲ್ಲಾ ಮಟ್ಟದ ವ್ಯಾಪ್ತಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಹಕಾರದ ಪ್ರಧಾನ ಕಚೇರಿಯನ್ನ ಸವಣೂರಿನಲ್ಲಿ ಸುಮಾರು ೨.೫೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಕಟ್ಟಡದ ಶಿಲಾನ್ಯಾಸ ಸಮಾರಂಭ ಜೂ. 9 ರಂದು ನನ್ನ ಹುಟ್ಟು ಹಬ್ಬದ ದಿನ ನಡೆಯಲಿದೆ ಎಂದರು.

ಸೀತಾರಾಮ ರೈರವರ ಅಮೃತ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ‍್ಯದರ್ಶಿ ಸೀತಾರಾಮ ಕೇವಳ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಜೊತೆ ಕಾರ‍್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ ವಂದಿಸಿದರು.

ಸುಧಾನ ವಿದ್ಯಾ ಸಂಸ್ಥೆಯ ಸಂಚಾಲಕ ರೆ,ವಿಜಯ ಹಾರ್ವಿನ್, ಪೀಟರ್ ವಿಲ್ಸ್‌ನ್ ಪ್ರಭಾಕರ್, ಬಾಪೂ ಸಾಹೇಬ್ ಸುಳ್ಯ, ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಶೈಲೇಷ್ ಅಂಬೆಕಲ್ಲು, ಮುಸ್ತುಫ್ ಸುಳ್ಯ, ಎಂ.ಎಸ್.ರಘುನಾಥ ರಾವ್ ದರ್ಭೆರವರುಗಳು ವಿವಿಧ ಸಲಹೆ, ಸೂವನೆಯನ್ನು ನೀಡಿದರು. ಸುಮಾರು62 ಮಂದಿ ಸಮಾರಂಭದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here