ಉಬರಡ್ಕ ಮಿತ್ತೂರು : ಅಂಬೇಡ್ಕರ್ ರಕ್ಷಣಾ ವೇದಿಕೆ  ಗ್ರಾಮ ಸಮಿತಿ ರಚನೆ

0

ಅಂಬೇಡ್ಕರ್ ರಕ್ಷಣಾ ವೇದಿಕೆ ಉಬರಡ್ಕ ಮಿತ್ತೂರು ಗ್ರಾಮದ ನೂತನ ಘಟಕ ಸಮಿತಿ ಅ.16ರಂದು ರಚಿಸಲಾಯಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಯೋಧ ಶಿವಪ್ರಸಾದ್ ನೆರವೇರಿಸಿ ಮಾತನಾಡಿದರು. ಸಭಾಧ್ಯಕ್ಷತೆಯನ್ನು ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪಿ.ಸುಂದರ ಪಾಟಾಜೆ ವಹಿಸಿಕೊಂಡು ಸಂಘಟನೆಯ ಬಗ್ಗೆ ಮಾತನಾಡಿದರು.
ನಂತರ ಅಮೈ ಮಡಿಯೂರು ಶಾಲೆಯ ಮುಖ್ಯ ಅಧ್ಯಾಪಕ ಪದ್ಮನಾಭ ಅತ್ಯಾಡಿ ಅವರು ಮುಖ್ಯ ಭಾಷಣ ಮಾಡಿ ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ನಿವೃತ್ತ ಯೋಧರದ ಶಿವಪ್ರಸಾದ್ ಇವರನ್ನು ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಸನ್ಮಾನಿಸಿ ಗೌರವಿಸಿದರು.
ಉಬರಡ್ಕ ಮಿತ್ತೂರು ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಘಟಕದ ಅಧ್ಯಕ್ಷರಾಗಿ ರಮೇಶ ಕೊಡಂಕೇರಿ, ಕಾರ್ಯದರ್ಶಿಯಾಗಿ ಗಣೇಶ್ ಪಾಲಡ್ಕ,ಮಹಿಳಾ ಅಧ್ಯಕ್ಷರಾಗಿ ನಳಿನಾಕ್ಷಿ, ಕಾರ್ಯದರ್ಶಿಯಾಗಿ ಶ್ರುತಿ,ಇವರನ್ನು ಆಯ್ಕೆ ಮಾಡಲಾಯಿತು. ಪ್ರಾರ್ಥನೆಯನ್ನು ಕಿಟ್ಟು ಅರಮನೆಗಯ ನೆರವೇರಿಸಿ ಸ್ವಾಗತಿಸಿ,ಧನಂಜಯ ಧನ್ಯವಾದ ಸಲ್ಲಿಸಿದರು. ವೇದಿಕೆಯಲ್ಲಿ ಎಸ್ ಡಿ .ಎಮ್ .ಸಿ .ಉಪಾಧ್ಯಕ್ಷರು ಮಂಜುಳಾ ವಿನಾಯಕ, ಗೆಳೆಯರ ಬಳಗ ಅಧ್ಯಕ್ಷ ವಿದ್ಯಾಧರ ಹರ್ಲಡ್ಕ, ಜಿಲ್ಲಾ ಸಮಿತಿ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ, ಸುಳ್ಯ ಘಟಕ ಉಪಾಧ್ಯಕ್ಷ ಆನಂದ ರಂಗತಮಲೆ,ಅರಂತೋಡು ಘಟಕ ಅಧ್ಯಕ್ಷ ತೇಜಕುಮಾರ್, ಹಲವು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here