ಸವಣೂರು ಮಾಲೆತ್ತಾರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ, ಕೃತಜ್ಞತಾ ಸಭೆ

0

ಪುತ್ತೂರು: ಜ. 24 ರಂದು ಜರಗಿದ ಸವಣೂರು ಮಾಲೆತ್ತಾರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ ಹಾಗೂ ಕೃತಜ್ಞತಾ ಸಭೆಯು ಮಾ. 7 ರಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಜರಗಿತು.

 


ಸಭೆಯ ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಆಡಳಿತದಾರರಾದ ವೆಂಕಪ್ಪ ಶೆಟ್ಟಿ ಸವಣೂರುಗುತ್ತುರವರು ಮಾತನಾಡಿ ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅತ್ಯಂತ ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆದಿರುವುದು ತುಂಬಾ ಸಂತೋಷ ತಂದಿದೆ. ಈ ಪುಣ್ಯ ಕಾರ್‍ಯದಲ್ಲಿ ಕೈಜೋಡಿಸಿದ ಜೀರ್ಣ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್ ಮತ್ತು ಸಮಿತಿ ಹಾಗೂ ಊರನವರಿಗೂ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು. ಮುಂದೆಯೂ ದೈವಸ್ಥಾನದ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಜೀರ್ಣ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲುರವರು ಮಾತನಾಡಿ ದೈವಸ್ಥಾನದ ಜೀರ್ಣ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಾಂಗವಾಗಿ ಎಲ್ಲರ ಸಹಕಾರದಿಂದ ನೇರವೇರಿದ್ದು, ಎಲ್ಲ ಖರ್ಚುಗಳು ಕಳೆದು ಸುಮಾರು 60 ಸಾವಿರ ರೂ, ಉಳಿಕೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಠಲ ರೈ ನೆಕ್ಕರೆ, ರಾಮಣ್ಣ ಗೌಡ ಬಾರಿಕೆ, ದಾಮೋದರ ಗೌಡ ಪಟ್ಟೆ, ಬಾಬು ಗೌಡ ಸುಣ್ಣಾಜೆ, ರಾಘವ ಗೌಡ ಗುರುಪುಂತ್ತಾರು, ಬಾಸ್ಕರ ಮಾಲೆತ್ತಾರು, ಶಿವಪ್ಪ ನಾಯ್ಕ ಬಾರಿಕೆ, ಗಣೇಶ್ ಪಟ್ಟೆ, ಹರೀಶ್ ಸುಣ್ಣಾಜೆ, ಸತೀಶ್ ಬಲ್ಯಾಯ, ಕೃಷ್ಣಪ್ಪ ಗೌಡ ಮಾಲೆತ್ತಾರು, ಕಿರಣ್ ಕೋಡಿಬೈಲು, ಶೈಲೇಷ್ ಭಂಡಾರಿ ಸವಣೂರು, ನಿತೀಶ್ ಹೊಸವೊಕ್ಲು, ಧರ್ಮಪಾಲ ಗೌಡ ನೆಕ್ಕರೆ, ಜೋಗಿ ಬೇರಿಕೆ, ನಾರಾಯಣ ಪೂಜಾರಿ ಮಾಲೆತ್ತಾರು, ಶ್ರೀಧರ್ ಸುಣ್ಣಾಜೆ ಉಪಸ್ಥಿತರಿದ್ದರು, ಬೆಳಿಯಪ್ಪ ಗೌಡ ಚೌಕಿಮಠ ಸ್ವಾಗತಿಸಿ, ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು.

LEAVE A REPLY

Please enter your comment!
Please enter your name here