ಸುಳ್ಯ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಮತ್ತು ಜೆ.ಕೆ.ಸಿಮೆಂಟ್ ರವರ ಟೆಕ್ನಿಕಲ್ ಕಾರ್ಯಾಗಾರ

0

 

ಸುಳ್ಯ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಮತ್ತು ‌ಜೆ.ಕೆ.ಸಿಮೆಂಟ್ ಲಿಮಿಟೆಡ್ ಕಂಪನಿಯ ಸಹಯೋಗದಲ್ಲಿ ಟೆಕ್ನಿಕಲ್ ವಿಷಯದ ಕುರಿತು ಕಾರ್ಯಾಗಾರವು ಅ‌.18 ರಂದು ಪರಿವಾರಕಾನ ಉಡುಪಿ ‌ಗಾರ್ಡನ್ ಹೋಟೆಲಿನ ಗ್ರ್ಯಾಂಡ್ ಪರಿವಾರ್ ಸಭಾಭವನದಲ್ಲಿ ನಡೆಯಿತು.

ಅಸೋಸಿಯೇಷನ್ ಅಧ್ಯಕ್ಷ ಪ್ರಸಾದ್ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು.ಜೆ.ಕೆ‌.ಸಿಮೆಂಟ್ ಕಂಪನಿಯ ಇಂಜಿನಿಯರ್ ಪ್ರಭುಲಿಂಗ್ ಪುಣ್ಣೆಶೆಟ್ಟಿ ಯವರು ಟೆಕ್ನಿಕಲ್ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿದರು. ಜೆ.ಕೆ.ಕಂಪನಿಯ ಮಂಗಳೂರು ಆರ್ .ಇ.ಪ್ರಜ್ವಲ್ ಪಿ.ಯಸ್ ಸುಳ್ಯ, ಎಸ್.ಇ
ಭವಿಶ್ ಶೆಟ್ಟಿ, ಡಿ.ಎಮ್.ಒ ಸತೀಶ್ ಹೆಚ್, ಎನ್,ಎಸ್.ಎಸ್.ಎ.ರಕ್ಷಿತ್ ಮಂಜು ಉಪಸ್ಥಿತರಿದ್ದರು.
ಸುಳ್ಯಅಸೋಸಿಯೇಷನ್ ಹಿರಿಯ ಸದಸ್ಯ ಸುಮಿತ್ರ ಇಂಜಿನಿಯರ್,‌ ಅಸೋಸಿಯೇಷನ್ ಕಾರ್ಯದರ್ಶಿ ಗಿರೀಶ್ ನಾರ್ಕೋಡು, ಖಜಾಂಜಿ ಶ್ಯಾಮ್ ಪ್ರಸಾದ್ ಎ.ಡಿ,ಜಾಲ್ಸೂರು ಜೆ.ಕೆ.ಸಿಮೆಂಟ್ ಅಧಿಕೃತ ಮಾರಾಟಗಾರರು, ‌ಮೀರಾ ಎಂಟರ್ ಪ್ರೈಸಸ್ ಮಾಲಕ‌ ಪ್ರಶಾಂತ್ ಮೋಂಟಡ್ಕ‌ ಹಾಗೂ ಸುಳ್ಯ ತಾಲೂಕು ಇಂಜಿನಿಯರ್ಸ್ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಕಾರ್ಯಾಗಾರ ದಲ್ಲಿ ಭಾಗವಹಿಸಿದರು. ಅಧ್ಯಕ್ಷ ಪ್ರಸಾದ್ ಎಂ.ಎಸ್ ಪ್ರಾಸ್ತಾವಿಕ ‌ಮಾತನಾಡಿದರು. ಕಾರ್ಯದರ್ಶಿ ಗಿರೀಶ್ ನಾರ್ಕೋಡು ‌ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here