ಸಂಪಾಜೆ : ಗ್ರಾಮ ಮಟ್ಟದ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಆಶಾ ಕಾರ್ಯಕರ್ತೆಯರ ಸಭೆ

0

ಪರಿಸರ ಸ್ವಚ್ಚತೆ, ಸಾಂಕ್ರಾಮಿಕ ರೋಗ ಹರಡುವಿಕೆಯ ಎಚ್ಚರಿಕೆ ಕುರಿತು ಚರ್ಚೆ

ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಮಟ್ಟದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಅರೋಗ್ಯ, ಆಶಾ ಕಾರ್ಯಕರ್ತರುಗಳ ಸಭೆ ನಡೆಯಿತು.

ಗ್ರಾಮ ಮಟ್ಟದಲ್ಲಿ ಅರೋಗ್ಯ ಇಲಾಖೆಯ ವತಿಯಿಂದ ಸ್ವಚ್ಛತೆ, ಹಾಗೂ ಗ್ರಾಮದಲ್ಲಿ ಶಾಲೆ, ಕಾಲನಿ ಪೇಟೆ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಶಾಲಾ ಪರಿಸರ ಸ್ವಚ್ಛತೆ ಬಗ್ಗೆ ಗಮನ ಹರಿಸುವುದು. ನವಂಬರ್ 14 ರ ಮಕ್ಕಳ ದಿನಾಚರಣೆಯ ಅಂಗವಾಗಿ ಗ್ರಾಮ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಸಾಂಸ್ಕೃತಿಕ ಹಬ್ಬ ಮಾಡಲು ತೀರ್ಮಾನಿಸಲಾಯಿತು. ಕಾರ್ಯಕ್ರಮ ನಡೆಸಲು ತೆಕ್ಕಿಲ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಟಿ. ಎಮ್. ಶಾಹಿದ್ ತೆಕ್ಕಿಲ್ ರವರು ಒಪ್ಪಿಕೊಂಡು ನವಂಬರ್ 14 ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರ ತನಕ ಕಾರ್ಯಕ್ರಮ ನಡೆಸಲು ಹಾಗೂ ವಿವಿಧ ಶಾಲೆಗಳ ಸ್ಪರ್ಧಾಳುಗಳ ಸ್ಪರ್ಧೆ ನಡೆಸಲು ತೀರ್ಮಾನಿಸಲಾಯಿತು ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಮಾಹಿತಿಯನ್ನು ನೀಡಿದರು ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಸುಂದರಿ ಮುಂಡ ಡ್ಕ . ಎಸ್. ಕೆ. ಹನೀಫ್, ಜಗದೀಶ್ ರೈ, ಪಿ. ಕೆ. ಅಬೂಸಾಲಿ ಗೂನಡ್ಕ, ರಜನಿ ಶರತ್, ವಿಮಲಾ, ಸುಶೀಲ ಕೈಪಡ್ಕ, ವಿಜಯ ಕುಮಾರ್, ಅನುಪಮಾ ಹಾಗೂ ತೆಕ್ಕಿಲ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಟಿ.ಎಮ್. ಶಾಹಿದ್ ತೆಕ್ಕಿಲ್. ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರುಕ್ಮಯ್ಯದಾಸ್,ಸವೇರಪುರ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ವನಿತಾ ಶಾರದಾ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕರಾದ ಹನುಮಂತಪ್ಪ, ದೊಡ್ಡಡ್ಕ ಸರಕಾರಿ ಶಾಲೆಯ ಶಿಕ್ಷಕರಾದ ಕಮಲಾಕ್ಷ ಕಲ್ಲುಗುಂಡಿ. ಆರ್. ಎಮ್. ಎಸ್. ಎ. ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಜಯಶ್ರೀ ಏನ್. ಕೆ. ಅಲ್ಪಸಂಖ್ಯಾತ ಕಾರ್ಯಕರ್ತೆ ರಹ್ಮತ್ ಬೀಬಿ, ಕಲ್ಲುಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಾವತಿ. ತೆಕ್ಕಿಕ್ ಶಿಕ್ಷಣ ಸಂಸ್ಥೆಯ ವಾಣಿ ಹಾಗೂ ಅನಿತಾ ಸವೆರೆಪುರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಹೊನ್ನಪ್ಪ ದೊಡ್ಡಮುನಿ,ಮಾರುತಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ಪುನೀತ ಕೆ. ತೆಕ್ಕಿಲ್ ಸಂಸ್ಥೆಯ ಆಡಳಿತಧಿಕಾರಿ ರಹೀಮ್ ಬೀಜದ ಕಟ್ಟೆ, ಕಲ್ಲುಗುಂಡಿ ಅರೋಗ್ಯ ಕೇಂದ್ರದ ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರಾ.ಧರ್ಮಸ್ಥಳ ಸೇವಾಪ್ರತಿನಿಧಿ ತಾರಾ. ಎಮ್. ಸಿ. ಅರೋಗ್ಯ ಸಹಾಯಕಿ ಭಾಗೀರಥಿ ಹಾಗೂ ಪುಷ್ಪಲತಾ ,ಆಶಾ ಕಾರ್ಯಕರ್ತರುಗಳಾದ ಮೋಹನಂಗಿ ಸವಿತಾ ರೈ, ಸೌಮ್ಯ, ಪ್ರೇಮಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here