ಕೊಕ್ಕೋ ಡ್ರೈಬೀನ್ಸ್ ಸರಬರಾಜು ವ್ಯವಹಾರದಲ್ಲಿ ಕ್ಯಾಂಪ್ಕೋಗೆ ವಂಚನೆ

0

  • ಮುಂಬೈನಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು:ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಡ್ರೈಬೀನ್ಸ್ ಸರಬರಾಜು ವ್ಯವಹಾರದಲ್ಲಿ ವಂಚನೆ ಮಾಡಿದ್ದ ಓರ್ವ ಆರೋಪಿಯನ್ನು ಮುಂಬೈನಲ್ಲಿ ಪೊಲೀಸರು ಬಂಽಸಿರುವುದಾಗಿ ವರದಿಯಾಗಿದೆ.

2018-19ರ ಅವಧಿಯಲ್ಲಿ ಕ್ಯಾಂಪ್ಕೋ ಕೊಕ್ಕೋ ಡ್ರೈ ಬೀನ್ಸ್‌ನ್ನು ಏಷಿಯನ್ ಎ-ಟಿಎ ಪ್ರಕಾರ ಕೋಸ್ಪಾಕ್ ಜನರಲ್ ಟ್ರೇಡಿಂಗ್ ಎಲ್‌ಎಲ್‌ಸಿ ದುಬೈ ಮೂಲಕ ಸುಂಕ ರಹಿತವಾಗಿ ಪಡೆಯುವ ಮೂಲಕ ಥೈಲ್ಯಾಂಡ್‌ನಿಂದ ಎಂದು ಆಮದುಕೊಳ್ಳಲಾಗಿತ್ತು. ಖರೀದಿ ಆದೇಶದ ಪ್ರಕಾರ ಕೋಸ್ಪಾಕ್ ಸಂಸ್ಥೆಯುವರು ಕಸ್ಟಮ್ಸ್ ಕ್ಲಿಯರೆನ್ಸ್ ಮಾಡಬೇಕು ಮತ್ತು ಕೊಕ್ಕೋ ಡ್ರೈಬೀನ್ಸ್‌ನ್ನು ಕ್ಯಾಂಪ್ಕೋ ಗೋದಾಮಿಗೆ ತಲುಪಿಸಬೇಕು.ನಿಯಮದಂತೆ ಕೋಸ್ಪಾಕ್ ಇಂಡೆಂಟ್ ಮಾಡಿದ ಎಲ್ಲಾ ಸರಕುಗಳನ್ನು ಕ್ಯಾಂಪ್ಕೋ ಗೋದಾಮಿಗೆ ತಲುಪಿಸಿತ್ತು.

ಕ್ಯಾಂಪ್ಕೋ ಗೋದಾಮಿಗೆ ಕಸ್ಟಮ್ಸ್ ಭೇಟಿ ರೂ.10.07 ಕೋಟಿ ಕಸ್ಟಮ್ಸ್ ಪಾವತಿಸಲು ಸೂಚನೆ: ಕ್ಯಾಂಪ್ಕೋ ಗೋದಾಮಿಗೆ ಕೊಕ್ಕೋ ಡ್ರೈಬೀನ್ಸ್‌ನ್ನು ಸರಬರಾಜು ಮಾಡಿದ ಬಳಿಕ 2019ರ ನವೆಂಬರ್‌ನಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ಅಧಿಕಾರಿಗಳು ಕ್ಯಾಂಪ್ಕೋ ಗೋದಾಮಿಗೆ ಭೇಟಿ ನೀಡಿದ್ದರು.ಕ್ಯಾಂಪ್ಕೋ ಗೋದಾಮಿಗೆ ಪೂರೈಸಲಾದ ಕೊಕ್ಕೋ ಡ್ರೈಬೀನ್ಸ್ ಮೂಲ ಥೈಲ್ಯಾಂಡ್ ಅಲ್ಲ.ಬದಲಿಗೆ ಇದು ಆಫ್ರಿಕನ್ ದೇಶಗಳಿಂದ ಬಂದಿದೆ ಎಂದು ಹೇಳಿ ಅವರು ಕೊಕ್ಕೋ ಬೀನ್ಸ್ ಮುಟ್ಟುಗೋಲು ಹಾಕಿಕೊಂಡಿದ್ದರಲ್ಲದೆ, ಇದನ್ನು ಬಿಡುಗಡೆ ಮಾಡಲು ವಿಭಿನ್ನ ಸುಂಕ, ಬಡ್ಡಿ ಮತ್ತು ದಂಡವಾಗಿ ರೂ.10.07 ಕೋಟಿಯನ್ನು ಕಸ್ಟಮ್ಸ್‌ಗೆ ಪಾವತಿಸಲು ಕ್ಯಾಂಪ್ಕೋ ಗೆ ಕಸ್ಟಮ್ಸ್ ಸೂಚನೆ ನೀಡಿತ್ತು.

ಕೋಸ್ಪಾಕ್ ವಿರುದ್ಧ ಕ್ಯಾಂಪ್ಕೋ ದೂರು: ಕಸ್ಟಮ್ಸ್‌ನವರು ಕ್ಯಾಂಪ್ಕೋ ಗೋದಾಮಿಗೆ ಭೇಟಿ ನೀಡಿ 10.07 ಕೋಟಿ ರೂ.ಕಸ್ಟಮ್ಸ್ ಪಾವತಿಸಲು ಸೂಚನೆ ನೀಡಿದ ನಂತರದ ಬೆಳವಣಿಗೆಯಲ್ಲಿ, ಖರೀದಿ ನಿಯಮ ಉಲ್ಲಂಸಿ ವಂಚನೆ ಮಾಡಿರುವ ಆರೋಪದಲ್ಲಿ ಕೋಸ್ಪಾಕ್ ಸಂಸ್ಥೆ ಮಾಲಕ ವಿನ್ಸಿ ಪಿಂಟೋ ಮತ್ತು ನಿರ್ದೇಶಕ ಜೀವನ್ ಲೋಬೋ ವಿರುದ್ಧ ಕ್ಯಾಂಪ್ಕೋ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿತ್ತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಥೈಲ್ಯಾಂಡ್ ಬದಲು ಆಫ್ರಿಕನ್ ದೇಶಗಳಿಂದ ಕೊಕ್ಕೋ ಡ್ರೈಬೀನ್ಸ್ ಸರಬರಾಜು ಮಾಡಿರುವುದಲ್ಲದೆ, ಖರೀದಿ ಆದೇಶದ ಪ್ರಕಾರ ಕಸ್ಟಮ್ಸ್ ಕ್ಲಿಯರೆನ್ಸ್ ಮಾಡದೆ ವಂಚಿಸಿರುವ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳ ಪೈಕಿ ವಿನ್ಸಿ ಪಿಂಟೋರವರನ್ನು ಮಾ.7ರಂದು ಮುಂಬೈಯಲ್ಲಿ ಪೊಲೀಸರು ಬಂಽಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here