ಹರಿಹರ ಪಳ್ಳತಡ್ಕದಲ್ಲಿ ವಿವೇಕ ಸಂಪದ ಓದುಗರ ಸಮಾವೇಶ

0

 

ಹರಿಹರ ಪಳ್ಳತಡ್ಕದಲ್ಲಿ ವಿವೇಕ ಜಾಗೃತ ಬಳಗ ಹರಿಹರಪಳ್ಳತಡ್ಕ ಮತ್ತು ಸುಬ್ರಹ್ಮಣ್ಯ ವತಿಯಿಂದ ವಿವೇಕ ಸಂಪದ ಓದುಗರ ಸಮಾವೇಶ ಅ. 16ರಂದು ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ನಡೆಯಿತು.

 

ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ದೀಪ ಬೆಳಗಿಸಿದರು. ನಿವೃತ್ತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಚಿಂತಕರಾಗಿ ಯಶವಂತ ಡಿ.ಎಸ್, ಅತಿಥಿಗಳಾಗಿ ರಾಮಚಂದ್ರ ಪ್ಪಳಂಗಾಯ, ಸೋಮ ಸುಂದರ ಕೂಜುಗೋಡು, ಪಿಡಿಒ ಪುರುಷೋತ್ತಮ ಮಣಿಯಾನ ಮನೆ ಉಪಸ್ಥಿತರಿದ್ದರು . ಈ ಸಂದರ್ಭ ಡಾ। ಚಂದ್ರಶೇಖರ ಕಿರಿಭಾಗ ದಂಪತಿಗಳನ್ನು ಗೌರವಿಸಲಾಯಿತು. ಸುಂದರ ಗೌಡ ಐನೆಕಿದು ಸ್ವಾಗತಿಸಿ ಮಿಥುನ್ ಹೊಪ್ಪಾಳೆ ವಂದಿಸಿದರು. ಉಷಾ ಪ್ರಭಾಕರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here