ಅ.30 ರಂದು ಯುವಜನ ಸಂಯುಕ್ತ ಮಂಡಳಿ ವತಿಯಿಂದ ಯುವಕ-ಯುವತಿ ಮಂಡಲಗಳಿಗೆ ತರಬೇತಿ ಕಾರ್ಯಗಾರ

0

 

 

 

ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶಯದಲ್ಲಿ ಸುಳ್ಯ ತಾಲೂಕಿನ ಯುವಕ – ಯುವತಿ ಮಂಡಲಗಳಿಗೆ ತರಬೇತಿ ‘ಯುವ ಸಮರ್ಥತಾ – 2022’ ಕಾರ್ಯಕ್ರಮ ಅ.30 ರಂದು ಸುಳ್ಯ. ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ನಡೆಯಲಿದೆ.

ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಕಾರ್ಯಕ್ರಮ ಆಯೋಜನೆ, ದಾಖಲೆ ಪತ್ರಗಳ ನಿರ್ವಹಣೆ, ಲೆಕ್ಕಪತ್ರಗಳ ನಿರ್ವಹಣೆ ಕುರಿತು ಪುತ್ತೂರು ತರಬೇತುದಾರ ರಾಜೇಶ್ ಬೆಜ್ಜಂಗಳ ಉಪನ್ಯಾಸ ನೀಡಲಿದ್ದಾರೆ.
ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ, ಕಾರಣಗಳು, ರೋಗದ ವಿಧಗಳು, ಕ್ಯಾನ್ಸರ್ ರೋಗಕ್ಕೆ ಮುಂಜಾಗ್ರತೆ ಕ್ರಮಗಳ ಕುರಿತು ಡಾ. ರವಿವರ್ಮ ಕೆ ಮಾತನಾಡಲಿದ್ದಾರೆ.
ಹೃದಯ ರೋಗದ ಕುರಿತು ಮಾಹಿತಿ, ಯುವಕರಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣ ಇತ್ಯಾದಿ ವಿಷಯಗಳ ಕುರಿತು ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಎಂ.ಎಸ್. ಭಟ್ ಮಾತನಾಡಲಿದ್ದಾರೆ.
ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಕುರಿತು ಸವಣೂರು ವಿದ್ಯಾರಶ್ಮಿ ವಿದ್ಯಾಲಯಗಳ ಪಾಂಶುಪಾಲ ಸೀತಾರಾಮ ಕೇವಳ ಉಪನ್ಯಾಸ ನೀಡುವರು.

LEAVE A REPLY

Please enter your comment!
Please enter your name here