ಅರೆಭಾಷೆ ಅಕಾಡೆಮಿ : 3 ವರ್ಷಗಳಲ್ಲಿ 162 ಕಾರ್ಯಕ್ರಮ

0

 

 

ಹೊಸ ತಲೆಮಾರಿಗೆ ಅರೆಭಾಷೆ ಸಂಸ್ಕೃತಿ ತಲುಪಿಸುವ ಕಾರ್ಯ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಸಂವರ್ಧನೆಗೋಸ್ಕರ 2011 ರಲ್ಲಿ ಹುಟ್ಟಿಕೊಂಡ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ನಾಲ್ಕನೆ ಅವಧಿಯ 3 ವರ್ಷಗಳಲ್ಲಿ 162 ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿರುವುದಲ್ಲದೆ, ಅರೆಭಾಷೆ ಪದಕೋಶ, ಅರೆಭಾಷೆ ವಿಶ್ವಕೋಶ, ಅರೆಭಾಷೆ ಪಾರಂಪರಿಕ ವಸ್ತು ಕೋಶವನ್ನು ಮಾಡಲಾಗಿದೆ. ಜತೆಗೆ ಹೊಸ ತಲೆಮಾರಿಗೆ ಅರೆಭಾಷೆ ಸಂಸ್ಕೃತಿಯನ್ನು ತಲುಪಿಸುವ ಕಾರ್ಯವು ಅಕಾಡೆಮಿಯಿಂದ ಮಾಡಲಾಗಿದೆ ಎಂದು ಅರೆಭಾಷೆ ಅಕಾಡೆಮಿ ನಿರ್ಗಮನಾಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದ್ದಾರೆ.

ಅ.20 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 3 ವರ್ಷದಲ್ಲಿ ಮಾಡಿದ ಕೆಲಸಗಳ ಕುರಿತು ವಿವರ ನೀಡಿದರು.

“2019-2022ರ ಸಾಲಿನಲ್ಲಿ ಅಕಾಡೆಮಿಯ ಮೊದಲ ಸಭೆಯಲ್ಲಿ ದೀರ್ಘಾವಧಿ, ಮಧ್ಯಮಾವಧಿ, ಅಲ್ಪಾವಧಿ ಯೋಜನೆಯ ಕೆಲಸ ಮಾಡಲು ನಿರ್ಧರಿಸಿದ್ದೆವು.

ಅದರಂತೆ ದೀರ್ಘಾವಧಿಯಲ್ಲಿ ಅರೆಭಾಷೆ ಪದಕೋಶ ಮಾಡುವುದು ಸವಾಲಾಗಿತ್ತಾದರೂ 18 ಸಾವಿರ ಪದಗಳಿರುವ 950 ಪುಟದ ಪುಸ್ತಕವನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಹೊರತಂದಿದ್ದೇವೆ. ಅರೆಭಾಷೆ ಪಾರಂಪರಿಕ ವಸ್ತು ಕೋಶ, ಅರೆಭಾಷೆ ವಿಶ್ವಕೋಶವನ್ನು ಸುಸೂತ್ರವಾಗಿ ಮಾಡಲಾಗಿದೆ. ಈ ಪುಸ್ತಕ ಗಳಿಗೆ ಐ.ಎಸ್.ಬಿ.ಎನ್. ಮಾನ್ಯತೆ ದೊರೆತಿದೆ ಎಂದು ಹೇಳಿದರು.

ಅರೆಭಾಷೆ ಸಂಶೋಧನಾ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯದ ಲ್ಲಿ ಸ್ಥಾಪನೆ ಆಗಿರುವುದು ನಮ್ಮ ಅವಧಿಯ ಬಹುದೊಡ್ಡ ಸಾಧನೆ. ಇದಕ್ಕಾಗಿ ಈಗಾಗಲೇ ಬಜೆಟ್ ನಲ್ಲಿ ಹಣವನ್ನು ಮೀಸಲಿರಿಸಲಾಗಿದೆ.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕ್ಕೆ ಸಂಬಂಧಿಸಿದ ಅಕಾಡೆಮಿ ಪ್ರಕಟಿತ 38 ಪುಸ್ತಕಹಖು, ಸ್ವಪ್ರಕಟಿತ ಲೇಖಕರ 21 ಪುಸ್ತಕಗಳು, 142 ಕೊಡವ ಸಂಗಾತಿ ಸಂಚಿಕೆ, 25 ಹಿಂಗಾರ ಪತ್ರಿಕೆಗಳು ಜನರಿಗೆ ಡಿಜಿಟಲ್ ಮಾದರಿಯಲ್ಲಿ ಸಿಗುವಂತೆ ಬಿಡುಗಡೆ ಆಗಿವೆ. ಇವಿಷ್ಟೇ ಅಲ್ಲದೆ ಅರೆಭಾಷೆ ಸಾಧಕರ ಡಾಕ್ಯುಮೆಂಟರಿ, ಡಿಸೆಂಬರ್ 15 ರಂದು ಅರೆಭಾಷೆ ದಿನಾಚರಣೆ, ವಿಶೇಷ ಅಂಚೆ ಲಕೋಟೆ ಬಿಡುಗಡೆ, ಆರೆಭಾಷೆ ಸಾಧಕರ ಮಾಲೆ, ಅರೆಭಾಷೆ ಸೃಜನಶೀಲ ಬರವಣಿಗೆ ಮತ್ತು ಪುಸ್ತಕ ಪ್ರಕಟಣೆ,ಅರೆಭಾಷೆ ಚಲನಚಿತ್ರಗಳಿಗೆ ಸಹಾಯಧನ, ರಂಗಭೂಮಿ ಚಟುವಟಿಕೆ, ಅರೆಭಾಷೆ ಯಕ್ಷಗಾನ ಮತ್ತು ತಾಳಮದ್ದಳೆ ಕೃತಿ ರಚನೆ, ಅರೆಭಾಷೆ ಸುಗಮ ಸಂಗೀತ, ಅರೆಭಾಷೆ ಸುಪ್ರಭಾತ ಮತ್ತು ಸೋಭಾನೆ ಧ್ವನಿಮುದ್ರಣ, ಅರೆಭಾಷೆ ಸಾಹಿತ್ಯ ಸಮ್ಮೇಳನ, ಅಂತರ್ಜಾಲದಲ್ಲಿ ಸರಣಿ ಉಪನ್ಯಾಸ,ಅರೆಭಾಷೆ ಫೆಲೋಶಿಪ್ ಯೋಜನೆ, ಸಂಸ್ಕೃತಿ ಶಿಬಿರಗಳು, ದಶವರ್ಷದ ಸಂಭ್ರಮ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂವರ್ಧನೆ ಸಮಿತಿ ರಷನೆ, ವಾದ್ಯಪರಿಕರಗಳ ವಿತರಣೆ, ಅರೆಭಾಷಿಗರು ಜನಗಣತಿಯಲ್ಲಿ ಸೇರ್ಪಡೆಗೆ ಪ್ರಯತ್ನ, ಚಿತ್ರಕಲಾ ಶಿಬಿರ ಹೀಗೆ ಹಲವು ಕಾರ್ಯಗಳನ್ನು ಮಾಡಿದ್ದೇವೆ.

ಹೊಸ ತಲೆಮಾರಿಗೆ ಅರೆಭಾಷೆ ಸಂಸ್ಕೃತಿ ತಲುಪಿಸುವ ನಿಟ್ಟಿನಲ್ಲಿ ನಾಟಕ, ಕಾರ್ಯಾಗಾರಗಳು, ಸಾಹಿತ್ಯ ಸಂಘ ರಚನೆಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಪಾರಂಪರಿಕ ಗ್ರಾಮದ ಕಲ್ಪನೆಯನ್ನಿಟ್ಟು ಕೆಲಸ ಕಾರ್ಯ ಮಾಡಲಾಯಿತು. ಆದರೆ ಆ ಜಾಗ ಡೀಮ್ಡ್ ಫಾರೆಸ್ಟ್ ಆಗಿದ್ದರಿಂದ ಅದು ಆಗಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಕ್ಷ್ಮೀನಾರಾಯಣರು, ಈ ತಂಡದ ಎಲ್ಲ ಸದಸ್ಯರು ಅಕಾಡೆಮಿಗೆ ಅರ್ಜಿ ಹಾಕಿ ಹೋದವರಲ್ಲ. ನಮ್ಮ ಹೆಸರು ಪ್ರಕಟವಾದಾಗಲೇ ನಮಗೆ ಗೊತ್ತಾದುದು. ಈಗ ನಮ್ಮ ಅವಧಿ ಮುಕ್ತಯವಾಗಿದ್ದು ಅಕಾಡೆಮಿ ಗೆ ಬರುವ ಅನುದಾನದ ಇತಿ ಮಿತಿಯೊಳಗೆ ತೃಪ್ತಿದಾಯಕ ಕೆಲಸ ಮಾಡಲಾಗಿದೆ” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರುಗಳಾದ ಎ.ಟಿ.ಕುಸುಮಾಧರ, ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ, ಕಿರಣ ಕುಂಬಳಚೇರಿ ಇದ್ದರು.

LEAVE A REPLY

Please enter your comment!
Please enter your name here