ಪುತ್ತೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಜ ಡಾ.ಏಂಜಲ್ ರಾಜ್ ಅವರಿಂದ 3ವಿಶೇಷ ಅಂಚೆ ಲಕೋಟೆಗಳ ಬಿಡುಗಡೆ

0

ಪುತ್ತೂರು: ಕಾರ್ಕಳ ಉತ್ಸವ-2022 ರ ಶುಭ ಸಂದರ್ಭದಲ್ಲಿ , ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಾರ್ಕಳ ಪ್ರಧಾನ ಅಂಚೆ ಕಛೇರಿಯಲ್ಲಿ ಮಾ.8 ರಂದು ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಡಾ. ಏಂಜಲ್ ರಾಜ್ ರವರು 3 ವಿಶೇಷ ಅಂಚೆ ಲಕೋಟೆಗಳ ಬಿಡುಗಡೆಗೊಳಿಸಿದರು.

 


ಕಾರ್ಕಳ ಸುತ್ತಮುತ್ತಲಿನ ಮೂರು ಖ್ಯಾತಿವೆತ್ತ ವ್ಯಕ್ತಿತ್ರಯರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಗಳನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪುತ್ತೂರು ಅಂಚೆ ವಿಭಾಗದ ಸಹಯೋಗದೊಂದಿಗೆ ಬಿಡುಗಡೆಗೊಳಿಸಿತು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಪ್ರಥಮವಾಗಿ, ಕಾರ್ಕಳದ ಖ್ಯಾತ ಶಿಲ್ಪಿಗಳಾದ ಶ್ರೀ ಕೆ ಶಾಮರಾಯ ಆಚಾರ್ಯ (15.02.1926 – 08.06.2011), ಎರಡನೆಯದಾಗಿ, ರಾಜಕಾರಣಿ ಮತ್ತು ನ್ಯಾಯಮೂರ್ತಿಗಳಾಗಿದ್ದ ಕೌಡೂರು ಸದಾನಂದ ಹೆಗ್ಡೆ (11-06-1909 – 24-05-1990), ಮೂರನೆಯದಾಗಿ, ಹೆಸರುವಾಸಿಯಾದ ಶಿಲ್ಪಿ ಶ್ರೀ ರೆಂಜಾಳ ಗೋಪಾಲಕೃಷ್ಣ ಶೆಣೈ (6-01-1897 – 01-12-1985) ಇವರ ಸ್ಮರಣಾರ್ಥ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆಗೊಳಿಸುವುದರ ಮೂಲಕ ಸ್ಮರಿಸಲಾಯಿತು. ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ಜೋಸೆಫ್ ರೋಡ್ರಿಗಸ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಕಳ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರ. ಚಂದ್ರ ನಾಯ್ಕ್ ರವರ ಸ್ವಾಗತಿಸಿದರು. ಕಾರ್ಕಳ ಪ್ರಧಾನ ಅಂಚೆ ಪಾಲಕ ಪ್ರಸನ್ನ ಹೆಗ್ಡೆ ವಂದಿಸಿದರು. ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕೆ ಎಸ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here