ಆದಿ ದ್ರಾವಿಡ ಯುವ ವೇದಿಕೆ ವತಿಯಿಂದ ಅಭಿನಂಂದನೆ, ಸನ್ಮಾನ, ಕ್ರೀಡಾಕೂಟ

0

ಸುಳ್ಯದ ಕೆವಿಜಿ ಟೌನ್ ಹಾಲ್ ನಲ್ಲಿ ಆದಿ ದ್ರಾವಿಡ ಯುವ ವೇದಿಕೆ ದ.ಕ. ಇದರ ಆಶ್ರಯದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಭಿನಂಂದನೆ, ಸನ್ಮಾನ, ಕ್ರೀಡಾಕೂಟ ಕಾರ್ಯಕ್ರಮ ಅ. ೧೬ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಾರ್ದನ ಉಬರಡ್ಕ ದೀಪ ಪ್ರಜ್ವಲನೆ ಮೂಲಕ ಮಾಡಲಾಯಿತು. ನಂತರ ಆಟೋಟ ಸ್ಪರ್ಧೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ನಡೆಸಲಾಯಿತು. ನಂತರ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಆದಿ ದ್ರಾವಿಡ ಯುವ ವೇದಿಕೆ ದ. ಕ. ಇದರ ಅಧ್ಯಕ್ಷ ರಾಮಚಂದ್ರ ಬಿ ಕೆ ಕೊಯಿಲ ವಹಿಸಿದ್ದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಜನಾರ್ದನ ಬಿ ಸಿ ರೋಡ್ ಪುಷ್ಪರ್ಚನೆ ಮಾಡಿ, ಸುಳ್ಯ ಮೀಸಲಾತಿ ವಿಧಾನ ಸಭಾ ಕ್ಷೇತ್ರದಲ್ಲಿ ಆದಿ ದ್ರಾವಿಡ ಸಮುದಾಯದ ಸಮರ್ಥ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶವನ್ನು ನೀಡಬೇಕೆಂದು ರಾಜಕೀಯ ಪಕ್ಷಗಳಿಗೆ ಆಗ್ರಹಿಸಿದರು. ಪ್ರಧಾನ ಭಾಷಣವನ್ನು ಶ್ರೀ ರಾಜ, ಶಕ್ತಿ ಮೋಟರ್ಸ್ ಬಿ ಸಿ ರೋಡ್ ಮಾಡಿ, ಅಂಬೇಡ್ಕರ್ ತತ್ವ ಸಿದ್ದಂತಗಳ ಬಗ್ಗೆ ವಿವರಿಸಿ ಶೋಷಿತ ಸಮುದಾಯದ ಅಭಿವೃದ್ಧಿಗೆ ಸಂಘಟನೆಯೇ ಪ್ರಮುಖ ಅಸ್ತ್ರ ಎಂದರು. ಅತಿಥಿಗಳಾಗಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ , ಜಿ.ಪಂ. ಮಾಜಿ ಸದಸ್ಯ ಎಸ್.ಎನ್. ಮನ್ಮಥ , ಆದಿ ದ್ರಾವಿಡ ಸಮುದಾಯದ ಅಭಿವೃದ್ಧಿ ವಿಚಾರವಾಗಿ ತಮ್ಮಿಂದಗುವ ಸಹಾಯದ ಬರವಸೆಯನ್ನು ನೀಡಿದರು. ಶೇಖರ್ ಕುಕ್ಕೆಡಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸೂರಜ್ ಮ್ಯಾಂಗಲೋರ್, ಅನಿಲ್ ಕಂಕನಾಡಿ, ಅಶೋಕ್ ಎಡಮಲೆ ಯುವ ವೇದಿಕೆಯ ಒಳ್ಳೆಯ ನಡೆಯ ಬಗ್ಗೆ ಶ್ಲಾಘಿಸಿದರು.
ಕೊರಗಪ್ಪ ಕೊಯಿಲ, ದಿಲೀಪ್,ಮೋನಪ್ಪ ರಾಜ ರಾಂಪುರ, ನಳಿನಿ ಕೊಡ್ತಿಲ್, ಸರೋಜಿನಿ ಮರ್ಕಜ, ಚೋಮ ನಾವೂರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಮಾಡಲಾಯಿತು. ಕಲಾ ಮತ್ತು ಕೃಷಿ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಆಶಾ ಕಾರ್ಯಕರ್ತರು, ಅಂಗನವಾಡಿ ಸಹಾಯಕರನ್ನು ಅಭಿನಂದಿಸಲಾಯಿತು. ಮದ್ಯಾಹ್ನ ಭೋಜನದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ ೬.೦೦ತನಕ ನಡೆಯಿತು. ಪ್ರಾಸ್ತಾವಿಕ ಭಾಷಣವನ್ನು ಶತೀಶ್ ಬಿಳಿಯಾರು ಮಾಡಿದರು. ಸ್ವಾಗತವನ್ನು ರಮೇಶ್ ಬೂಡು ಮಾಡಿದರು. ಚಂದ್ರಶೇಖರ ಮೊರಂಗಲ್ಲು ಅಭಿನಂದನೆ ಮಾಡಿದರು. ಸೀತಾರಾಮ್ ಮೊರಂಗಲ್ಲು ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here