ಪುತ್ತೂರು ಪೊಲೀಸರ ಕಾರ್ಯಾಚರಣೆ – ಬೀಡಿ ಬ್ರಾಂಚ್‌ನಿಂದ ತಂಬಾಕು, ಬೀಡಿಗಳನ್ನು ಕಳವುಗೈದ ಆರೋಪಿ ಬಂಧನ

0

ಪುತ್ತೂರು: ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ಸಮೀಪದ ಬೀಡಿ ಬ್ರಾಂಚ್ ಅಂಗಡಿಯಿಂದ ತಂಬಾಕು ಮತ್ತು ಬೀಡಿಗಳನ್ನು ಕಳವು ಮಾಡಿದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬೆಳಂದೂರು ಗ್ರಾಮದ ಕುದ್ಮಾರು ಅಬ್ಬಾಸ್ ಎಂಬವರ ಪುತ್ರ ಮಹಮ್ಮದ್ ಕುಂಞಿ ಎಮ್(52ವ)ರವರು ಬಂಧಿತ ಆರೋಪಿ. ಆರೋಪಿ ಮಹಮ್ಮದ್ ಕುಂಞಿ ಎಮ್ ಅವರು ಕೂರ್ನಡ್ಕದಲ್ಲಿ ಮಾ. 8ರಂದು ಬೀಡಿ ಬ್ರಾಂಚ್‌ವೊಂದರ ಬೀಗವನ್ನು ಒಡೆದು ಒಳನುಗ್ಗಿ 2 ಗೋಣಿ ತಂಬಾಕು ಮತ್ತು ಸುಮಾರು 18 ಸಾವಿರ ಬೀಡಿಗಳನ್ನು ಕಳವು ಮಾಡಿದ್ದರು. ಈ ಕುರಿತು ಬೀಡಿ ಬ್ರಾಂಚ್‌ನ ಮಾಲಕ ಕೆಮ್ಮಿಂಜೆ ನಿವಾಸಿ ಕೆ.ಮಹಮ್ಮದ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆ ಕಾರ್ಯ ನಡೆಸುತ್ತಿದ್ದಂತೆ ಆರೋಪಿಯನ್ನು ಮಾ.10ರಂದು ಸಂಜೆ ಬಂಧಿಸಿದ್ದಾರೆ. ಕೂರ್ನಡ್ಕ ಸಮೀಪ ಮನೆಯೊಂದ ಶೆಡ್‌ನಲ್ಲೂ ಕೂಡಾ ಕಳವು ಪ್ರಕರಣ ನಡೆದಿದ್ದು, ಈ ಕುರಿತು ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here