ದೇವ ಟ್ರೇಡಸ್೯ನಲ್ಲಿ ಸಿಂಗರ್ ಕಂಪೆನಿಯ ಹೊಲಿಗೆ ಯಂತ್ರಗಳ ಮಾರಾಟ ಮೇಳ

0

 

ಪುತ್ತೂರು: ಇಲ್ಲಿನ ಏಳ್ಮುಡಿಯ ಪಾಯಸ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವ ಟ್ರೇಟಸ್೯ನಲ್ಲಿ ಸಿಂಗರ್ ಕಂಪೆನಿಯ ಹೊಲಿಗೆ ಯಂತ್ರಗಳ ಎಕ್ಸ್ಚೇಂಜ್ ಆಫರ್ ಹಾಗೂ ಆಕರ್ಷಕ ರಿಯಾಯಿತಿ ದರದ ಮಾರಾಟ ಮೇಳ ಮಾ.11 ರಂದು ಪ್ರಾರಂಭಗೊಂಡಿತು. ಈ ಕೊಡುಗೆಯು ಮಾ.11 ರಿಂದ ಮಾ.13 ರವರೆಗೆ ಗ್ರಾಹಕರಿಗೆ ದೊರೆಯಲಿದೆ.

ಸಿಂಗರ್ ಕಂಪೆನಿಯ ರೀಜಿನಲ್ ಮ್ಯಾನೇಜರ್ ರಘನಾಥ್ ಮಾತನಾಡಿ’ಜನರಿಗೆ ಮನೆಯಲ್ಲೇ ಕುಳಿತು ಆದಾಯ ತರುವಂತಹ ಕೆಲಸವೆಂದರೆ ಹೊಲಿಗೆಯ ಕೆಲಸ ಹೀಗಾಗಿ ಸಿಂಗರ್ ಕಂಪೆನಿಯು ಗ್ರಾಹಕ ಸ್ನೇಹಿಯಾಗಿ ಅವರಿಗೆ ಸಹಾಯವಾಗುವ ರೀತಿಯ ಆಫರ್ ಗಳನ್ನು ನೀಡುವ ಸಲುವಾಗಿ ಪುತ್ತೂರಿನ ಅಧಿಕೃತ ಡೀಲರ್ ದೇವ ಟ್ರೇಡಸ್೯ನಲ್ಲಿ ಮಾರಾಟ ಮೇಳವನ್ನು 3 ದಿನಗಳ ಕಾಲ ಆಯೋಜಿಸಿದ್ದೇವೆ.ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ಎಂದು ಹೇಳಿದರು.

ಸಿಂಗರ್ ಕಂಪೆನಿಯ ಸೌತ್ ಕರ್ನಾಟಕ ಏರಿಯಾ ಮ್ಯಾನೇಜರ್ ಜಿತೇಂದ್ರ ಮಾತನಾಡಿ ‘ಸಿಂಗರ್ ಕಂಪೆನಿಯ ಎಲ್ಲಾ ಕ್ವಾಲಿಟಿ ಯಂತ್ರಗಳು ಪುತ್ತೂರಿನ ದೇವ ಟ್ರೇಡಸ್೯ನಲ್ಲಿ ದೊರೆಯುತ್ತಿದೆ.ಹೀಗಾಗಿ ನಾವು ಕಂಪೆನಿಯ ವತಿಯಿಂದ ಗ್ರಾಹಕರಿಗೆ ಹೆಚ್ಚು ಉಡುಗೊರೆ ನೀಡುವ ಹಾಗೂ ಗ್ರಾಹಕರೊಂದಿಗಿನ ಸಂಬಂಧ ಗಟ್ಟಿಗೊಳಿಸುವುದಕ್ಕಾಗಿ ಈ ಮೇಳವನ್ನು ಆಯೋಜಿಸಿದ್ದೇವೆ.ಈ ಮೇಳದಲ್ಲಿ ಹಳೆಯ ಹೊಲಿಗೆ ಯಂತ್ರಗಳ ಎಕ್ಸ್ಚೇಂಜ್,ಪೋರ್ಟೇಬಲ್ ಯಂತ್ರಗಳ ಖರೀದಿಗೆ ಉಡುಗೊರೆ,ಆಕರ್ಷಕ ರಿಯಾಯಿತಿ ಮುಂತಾದ ಗ್ರಾಹಕ ಸ್ನೇಹಿ ವಾತಾವರಣವಿದೆ.ಆದ್ದರಿಂದ ಹೆಚ್ಚಿನ ಗ್ರಾಹಕರು ಈ ಅವಕಾಶವನ್ನು ತಮ್ಮದಾಗಿಸಿಕೊಳ್ಳಿ’ಎಂದು ಹೇಳಿದರು. ಈ ಸಂದರ್ಭದಲ್ಲಿ ದೇವ ಟ್ರೇಡಸ್೯ನ ಪಾಲುದಾರರಾದ ಟಿ.ವಿ ರವೀಂದ್ರನ್,ಸಿಬ್ಬಂದಿಗಳಾದ ಪ್ರಶಾಂತ್ ಕುಡ್ವ,ಜಯಕುಮಾರ್, ರವಿಕಿರಣ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here